G7 ದೇಶಗಳಿಗೆ ರಷ್ಯಾ ಶಾಕ್: ಫೆಬ್ರವರಿಯಿಂದ ತೈಲ ಪೂರೈಕೆ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೈಲ ಬೆಲೆ ಮಿತಿ (ಗರಿಷ್ಠ ಬೆಲೆ) ನಿಗದಿಪಡಿಸಿದ ಜಿ7 ದೇಶಗಳಿಗೆ ರಷ್ಯಾ ಶಾಕ್ ನೀಡಿದ್ದು, ಶೀಘ್ರದಲ್ಲೇ ಆ ದೇಶಗಳಿಗೆ ತೈಲ ಪೂರೈಕೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಮುಂದಿನ ಫೆಬ್ರವರಿಯಿಂದ ತೈಲ ಪೂರೈಕೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಜಿ7 ದೇಶಗಳು ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ ಮತ್ತು ಯುರೋಪಿಯನ್ ಯೂನಿಯನ್ ಇತ್ತೀಚೆಗೆ ರಷ್ಯಾದ ತೈಲ ಆಮದಿನ ಮೇಲೆ ಬೆಲೆ ಮಿತಿಯನ್ನು ನಿರ್ಧರಿಸಿವೆ. ಅಂದರೆ ಅವರು ಪ್ರತಿ ಬ್ಯಾರೆಲ್ ತೈಲಕ್ಕೆ ಗರಿಷ್ಠ 60 ಡಾಲರ್ ಬೆಲೆ ನಿಗದಿಪಡಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯನ್ನು ವಿರೋಧಿಸಿ, ದೇಶವನ್ನು ಆರ್ಥಿಕವಾಗಿ ಹಾನಿ ಮಾಡುವ ಉದ್ದೇಶದಿಂದ ಜಿ7 ದೇಶಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ. ತಾನು ಉತ್ಪಾದಿಸುವ ತೈಲದ ಬೆಲೆಯನ್ನು ಇತರ ದೇಶಗಳು ಹೇಗೆ ನಿರ್ಧರಿಸುತ್ತವೆ ಎಂದು ರಷ್ಯಾ ಕೋಪಗೊಂಡಿದೆ. ಈ ಹಿನ್ನೆಲೆಯಲ್ಲಿ ದರ ಮಿತಿ ಜಾರಿಯಾಗಬೇಕಾದರೆ ಆಯಾ ದೇಶಗಳಿಗೆ ಮುಂದಿನ ಫೆಬ್ರವರಿಯಿಂದ ತೈಲ ಪೂರೈಕೆಯನ್ನು ನಿಲ್ಲಿಸಲು ರಷ್ಯಾ ಉದ್ದೇಶಿಸಿದೆ.

ಇನ್ನೊಂದೆಡೆ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತದ ಮೇಲೆ ಒತ್ತಡ ಹೇರಿ ತೈಲ ಖರೀದಿ ನಿಲ್ಲಿಸಲು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಯತ್ನಿಸುತ್ತಿವೆ. ಆದರೆ, ಭಾರತ ಇದಕ್ಕೆ ಸೊಪ್ಪುಹಾಕದೆ ರಷ್ಯಾದಿಂದ ತೈಲ ಆಮದು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!