ಈ ವರ್ಷದಲ್ಲಿ ಭಾರತೀಯರು ಊಬರ್‌ ಬಳಸಿಕೊಂಡಿರೋದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಊಬರ್‌ ಟ್ಯಾಕ್ಸಿಗಳ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಇಂದು ಭಾರತದ ಹಲವು ಪ್ರಮುಖ ನಗರಗಳಲ್ಲಿ ಮೆಚ್ಚುಗೆ ಗಳಿಸಿರೋ ಬಾಡಿಗೆ ಸಾರಿಗೆ ವ್ಯವಸ್ಥೆಯದು. ಆಫೀಸಿಗೆ ಹೋಗುವವರಿಂದ ಹಿಡಿದು ಶಾಪಿಂಗ್‌ಗೆ ಹೋಗುವವರ ವರೆಗೆ ಶಹರವಾಸಿಗಳಲ್ಲಿ ಬಹುತೇಕರು ಒಂದಲ್ಲ ಒಂದು ಸಮಯದಲ್ಲಿ ಊಬರ್‌ ಕ್ಯಾಬ್‌ ಬಳಕೆ ಮಾಡಿಯೇ ಇರುತ್ತಾರೆ. ಹೀಗೆ ಊಬರ್‌ ಕ್ಯಾಬ್‌ ಅನ್ನು ಭಾರತೀಯರು ಹೇಗೆಲ್ಲಾ ಬಳಸಿಕೊಂಡಿದ್ದಾರೆ ಎಂಬುದರ ಬಗ್ಗೆ ಊಬರ್‌ ವರದಿಯೊಂದನ್ನು ಬಿಡುಗಡೆ ಮಾಡಿದೆ. ಆ ವರದಿಯ ಪ್ರಕಾರ ಭಾರತದ ಮೆಟ್ರೋಪಾಲಿಟನ್‌ ಸಿಟಿಗಳೆಂದು ಕರೆಸಿಕೊಳ್ಳುವ ದೆಹಲಿ, ಬೆಂಗಳೂರು, ಹೈದ್ರಾಬಾದ್‌, ಮುಂಬೈ, ಕೋಲ್ಕತ್ತಾ ನಗರಗಳು ಅತಿ ಹೆಚ್ಚು ಊಬರ್‌ ಕ್ಯಾಬ್ಸ್‌ ಬುಕಿಂಗ್‌ ಮಾಡಿವೆ.

ಭಾರತೀಯರು 2022ರಲ್ಲಿ ಊಬರ್‌ ಕ್ಯಾಬ್‌ ನಲ್ಲಿ ಕಳೆದ ಸಮಯವೆಷ್ಟಿದೆ ಗೊತ್ತಾ? ಅಚ್ಚರಿಪಡಬೇಡಿ 11ಬಿಲಿಯನ್‌ ನಿಮಿಶಗಳಷ್ಟು ಸಮಯವನ್ನು ಭಾರತೀಯರು ಊಬರ್‌ ಕ್ಯಾಬ್ಸ್‌ ಗಳಲ್ಲಿ ಕಳೆದಿದದ್ದಾರೆ. ಬರೋಬ್ಬರಿ 4.5 ಬಿಲಿಯನ್‌ ಕಿಲೋಮೀಟರ್‌ ಗಳಷ್ಟು ದೂರವನ್ನು ಊಬರ್‌ ಕ್ಯಾಬ್‌ ಗಳ ಮೂಲಕ ಸಂಚರಿಸಿದ್ದಾರೆ. ಊಬರ್ ಪ್ರಕಾರ ಭೂಮಿ ಮತ್ತು ನೆಪ್ಚೂನ್‌ ಗ್ರಹದ ನಡುವೆ ಈಷ್ಟು ಅಂತರವಿದೆ.

ರಾಷ್ಟ್ರ ರಾಜಧಾನಿ ದೆಹಲಿ ಅತ್ಯಂತ ಹೆಚ್ಚು ಊಬರ್‌ ಟ್ರಿಪ್‌ ಗಳನ್ನು ಹೊಂದಿದ್ದು ಅದರಲ್ಲೂ ಆಫೀಸಿಗೆ ಹೋಗುವ ಟ್ರಿಪ್‌ ಗಳ ಸಂಖ್ಯೆ ಹೆಚ್ಚಿದೆ. ಭಾರತದಲ್ಲಿ ಹೆಚ್ಚಿನ ಉಬರ್ ಟ್ರಿಪ್‌ಗಳನ್ನು ಸಂಜೆ 5 ರಿಂದ ಸಂಜೆ 6 ರ ನಡುವೆ ಬುಕ್ ಮಾಡಲಾಗಿದೆ ಮತ್ತು ಶನಿವಾರ ವಾರದಲ್ಲಿ ಅತಿ ಹೆಚ್ಚು ಬುಕಿಂಗ್‌ಗಳನ್ನು ಸ್ವೀಕರಿಸಿದೆ. ಭಾರತದಲ್ಲಿನ ಟ್ರಿಪ್‌ಗಳ ಸಂಖ್ಯೆಯಲ್ಲಿ ಜನರು ಅತಿ ಹೆಚ್ಚು ಊಬರ್‌ ಗೋ (ಕಡಿಮೆಬೆಲೆಯ ಕಾರ್‌ ರೈಡ್)‌ ಅನ್ನು ಬಳಸಿದ್ದಾರೆ. ಊಬರ್‌ ಆಟೋ ಎರಡನೇ ಸ್ಥಾನದಲ್ಲಿದೆ.

ಕೋವಿಡ್‌ ಸಾಂಕ್ರಾಮಿಕದ ನಂತರ “2022 ರಲ್ಲಿ ಭಾರತೀಯರು ಮತ್ತೆ ದೊಡ್ಡ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಸಾಂಕ್ರಾಮಿಕ ರೋಗದ ನಂತರ ನಗರಗಳು ವ್ಯಾಪಾರಕ್ಕಾಗಿ ಮತ್ತೆ ತೆರೆದುಕೊಂಡಿವೆ” ಎಂದು ಉಬರ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!