ಪಾಶ್ಚಾತ್ಯರ ಶಸ್ತ್ರ ಪೂರೈಕೆ ಗುರಿಯಾಗಿಸಿ ದಾಳಿ ಮಾಡ್ತೇವೆ ಎಂದಿದೆ ರಷ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಾಜಧಾನಿ ಕೀವ್ ಬಳಿ ಇದ್ದ ರಷ್ಯ ಸೇನೆ ತನ್ನ ಜಮಾವಣೆಯನ್ನು ತುಸು ತಗ್ಗಿಸಿದೆ, ಇದು ಮತ್ತಷ್ಟು ಬಲದೊಂದಿಗೆ ಹೊಸ ಆಕ್ರಮಣ ಮಾಡಲಿದೆ ಎಂಬುದರ ಸೂಚನೆ ಎಂದು ಉಕ್ರೇನಿನ ಅಧ್ಯಕ್ಷ ವ್ಲೊದಿಮಿರ್ ಜೆಲೆನ್ಸ್ಕಿ ಹೇಳಿದ್ದರೆ, ಅತ್ತ ರಷ್ಯವು ಉಕ್ರೇನಿಗೆ ಶಸ್ತ್ರ ಪೂರೈಸುತ್ತಿರುವ ಪಾಶ್ಚಾತ್ಯರಿಗೆ ಎಚ್ಚರಿಕೆ ನೀಡಿದೆ.

“ಯುರೋಪಿನ ಬೇರೆ ಬೇರೆ ದೇಶಗಳಿಂದ ಉಕ್ರೇನ್ ಒಳಗೆ ಶಸ್ತ್ರ ಮತ್ತು ಮಿಲಿಟರಿ ಉಪಕರಣಗಳನ್ನು ಕಳುಹಿಸುತ್ತಿರುವ ಅಮೆರಿಕದ ಕ್ರಮ ಅಪಾಯಕಾರಿಯಾಗಿದೆ ಎಂದು ನಾವು ಎಚ್ಚರಿಸಿದ್ದೇವೆ. ಈ ಬಗೆಯ ಶಸ್ತ್ರಗಳನ್ನು ಪೂರೈಸುತ್ತಿರುವ ಸಾಗಾಣಿಕೆ ವಾಹನಗಳನ್ನು ಗುರಿಯಾಗಿಸಿ ನಾವು ದಾಳಿ ಮಾಡಬೇಕಾಗುತ್ತದೆ” ಎಂದು ರಷ್ಯ ವಿದೇಶ ವ್ಯವಹಾರಗಳ ಉಪ ಸಚಿವ ಸೆರ್ಗಿ ರ್ಯಾಗ್ಪೋವ್ ಹೇಳಿದ್ದಾರೆ.

ಇನ್ನೊಂದೆಡೆ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯವು ಮೆರಿಪೊಲ್ ನಗರದ ಮೇಯರ್ ಅನ್ನು ಅಪಹರಿಸಿದೆ ಹಾಗೂ ಇದು ಪ್ರಜಾಪ್ರಭುತ್ವದ ವಿರುದ್ಧ ಎಸಗುತ್ತಿರುವ ಹೀನ ಕೃತ್ಯ ಎಂದು ಹರಿಹಾಯ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!