ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ-ಉಕ್ರೇನ್ ನಡುವೆ ಎರಡು ಸುತ್ತಿನ ಮಾತುಕತೆ ನಡೆದರೂ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿಲ್ಲ. ಇಂದು ಎರಡು ರಾಷ್ಟ್ರಗಳ ನಡುವೆ ಮೂರನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಉಕ್ರೇನಿಯನ್ ಅಧಿಕಾರಿ ಡೇವಿಡ್ ಅರ್ಖಾಮಿಯಾ ತಿಳಿಸಿದ್ದಾರೆ.
ಯುದ್ಧ ನಿಲ್ಲಿಸುವ ಸಲುವಾಗಿ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೆ ಯಾವ ಮಾತುಕತೆಯೂ ಫಲಪ್ರದವಾಗದೇ ಇದ್ದು, ಈ ಸುತ್ತಿನ ಮಾತುಕತೆ ಮೇಲೆ ನಿರೀಕ್ಷೆ ಇದೆ. ರಷ್ಯಾ ಉಕ್ರೇನ್ ಮೇಲೆ ಭಾರೀ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆಸುತ್ತಿದ್ದು, ಅನೇಕ ನಗರಗಳು ನಾಶವಾಗಿದೆ. ಉಕ್ರೇನ್‌ನಲ್ಲಿ ಅನಿಲ ಪೂರೈಕೆಯೂ ಸ್ಥಗಿತಗೊಂಡಿದ್ದು, ಸಾವಿರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಇಂದಿನ ಮಾತುಕತೆಯಲ್ಲಿ ಎರಡೂ ಕಡೆಯವರು ಕದನ ವಿರಾಮ ಮತ್ತು ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡುವ ಬಗ್ಗೆ ಮಾತುಕತೆ ನಡೆಸಲು ಪ್ರಯತ್ನ ನಡೆಸಲಿದ್ದಾರೆ.