ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಗಾದಡಿ ಭಾರತ ಸರ್ಕಾರವು ಸಂಘರ್ಷಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ತಾಯ್ನಾಡಿಗೆ ಸ್ಥಳಾಂತರಿಸುತ್ತಿದೆ. ಈಗಾಗಲೇ 15,920 ಕ್ಕೂ ಹೆಚ್ಚಿನ ಜನರನ್ನು ಯಶಸ್ವಿಯಾಗಿ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಉಕ್ರೇನ್ ನಲ್ಲಿ ಉಳಿದಿರುವ ಭಾರತೀಯ ಮೂಲದ ಎಂಬ ವ್ಯಕ್ತಿ ವ್ಯಕ್ತಿಯೊಬ್ಬರು ಭಾರತಕ್ಕೆ ವಾಪಸ್ ಮರಳಲು ನಿರಾಕರಿಸಿದ್ದಾರೆ.
ಗಗನ್ ಎಂಬುವವರು ಅನೇಕ ವರ್ಷಗಳಿಂದ ಉಕ್ರೇನ್ ನಲ್ಲಿ ವಾಸವಿದ್ದಾರೆ. ವಿದೇಶಿ ಮೂಲದ ನನ್ನ ಗರ್ಭಿಣಿ ಹೆಂಡತಿಯನ್ನು ಯುದ್ಧ ಪೀಡಿತ ದೇಶದಿಂದ ಸ್ಥಳಾಂತರಿಸಲಾಗುವುದಿಲ್ಲ. ಹಾಗಾಗಿ ನಾನು ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಗಗನ್ ಹೇಳಿದ್ದಾರೆ. ನಾವು ಉಕ್ರೇನ್ ನೆರೆಯ ರಾಷ್ಟ್ರ ಪೋಲೆಂಡ್ ನಲ್ಲಿ ಆಶ್ರಯ ಪಡೆಯುತ್ತೇವೆ. ಈಗ ಉಕ್ರೇನ್ ನ ಲಿವಿವ್ ನಗರದಲ್ಲಿ ಸ್ನೇಹಿತರೊಂದಿಗೆ ಇದ್ದೇವೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ