ಸ್ವಾತಂತ್ರ್ಯೋತ್ಸವದಂದು ಸಾವಿನ ಮನೆಯಾದ ಉಕ್ರೇನ್:‌ ರಷ್ಯಾ ಭೀಕರ ದಾಳಿಗೆ 22 ಬಲಿ, 50 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಭೀಕರ ಯುದ್ಧದಿಂದ ನಲುಗಿರುವ ಉಕ್ರೇನಿಯನ್ನರಿಗೆ ಸ್ವಾತಂತ್ರ್ಯೋತ್ಸವ ದಿನವೂ ಕರಾಳ ದಿನವಾಗಿ ಮಾರ್ಪಟ್ಟಿದೆ. ಅಲ್ಲಿನ ರೈಲು ನಿಲ್ದಾಣದ ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ.
ರಷ್ಯಾದ ಸೋವಿಯತ್ ಒಕ್ಕೂಟದ ಆಳ್ವಿಕೆಯಿಂದ ಹೊರಬಂದ ಅಂಗವಾಗಿ ಉಕ್ರೇನ್‌ ಸ್ವಾತಂತ್ರ್ಯದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆದರೆ ಸಂಭ್ರಮಿಸಲು ಏನು ಉಳಿದಿಲ್ಲ. ಈ ಗಾಗಲೇ ಭೀಕರ ಸಂಘರ್ಷಕ್ಕೆ ಬಹುಪಾಲು ಉಕ್ರೇನ್‌ ನಾಶವಾಗಿದೆ. ಎರಡನೆಯ ಮಹಾಯುದ್ಧದ ನಂತರ ಯುರೋಪಿನ ಅತ್ಯಂತ ವಿನಾಶಕಾರಿ ಸಂಘರ್ಷದ ನೆಲವಾಗಿ ಉಕ್ರೇನ್‌ ಮಾರ್ಪಟ್ಟಿದೆ. ಸ್ವಾತಂತ್ರ್ಯ ದಿನದಂದು ರಷ್ಯಾದ ದಾಳಿ ನಡೆಸುವ ಅಪಾಯದ ಬಗ್ಗೆ ಝೆಲೆನ್ಸ್ಕಿ ಮಂಗಳವಾರ ಎಚ್ಚರಿಕೆ ನೀಡಿದ್ದರು. ಅದೀಗ ನಿಜವಾಗಿದೆ.
ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಿತ ಡೊನೆಟ್ಸ್ಕ್‌ನ ಪಶ್ಚಿಮಕ್ಕೆ ಸುಮಾರು 145 ಕಿಮೀ (90 ಮೈಲುಗಳು) ದೂರದಲ್ಲಿರುವ ಚಾಪ್ಲಿನ್ ಎಂಬ ಸಣ್ಣ ಪಟ್ಟಣದಲ್ಲಿ ಸಂಚರಿಸುತ್ತಿದ್ದ ರೈಲಿಗೆ ರಷ್ಯಾ ರಾಕೆಟ್‌ಗಳಿಂದ ಹೊಡೆದಿದೆ. ದಾಳಿಗೆ ನಾಲ್ಕು ರೈಲುಗಳು  ಬೆಂಕಿಗಾಹುತಿಯಾಗಿವೆ.
ಈ ದಾಳಿಯ ಬಳಿಕ ಉಕ್ರೇನ್ ಸ್ವಾತಂತ್ರೋತ್ಸವದ ಆಚರಣೆಗಳನ್ನು ರದ್ದುಗೊಳಿಸಲಾಗಿದೆ.
“ನಾವು ಭಯದಿಂದ ಮಾತುಕತೆಯ ಮೇಜಿನ ಬಳಿ ಕುಳಿತುಕೊಳ್ಳುವುದಿಲ್ಲ, ನಿಮ್ಮ ತಲೆಯ ಮೇಲೆ ಬಂದೂಕನ್ನು ಇಡುತ್ತೇವೆ. ಇದು ರಷ್ಯಾದ ಬೀಬತ್ಸ ಕೃತ್ಯ ಎಂದು ಅಧ್ಯಕ್ಷ ಝೆಲೆನ್ಸಿ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!