ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ರಾಜಧಾನಿ ಕೀವ್ನಿಂದ ಸ್ವಲ್ಪ ದೂರದಲ್ಲಿಯೇ ರಷ್ಯಾ ಸೇನಾಪಡೆ ಇದ್ದು, ಶೀಘ್ರವೇ ಭಾರಿ ಪ್ರಮಾಣದ ದಾಳಿ ಮಾಡುವ ಸಾಧ್ಯತೆ ಇದೆ. ಕೀವ್ ಸುತ್ತ ರಷ್ಯಾ ಸೇನೆ ಸುತ್ತುವರಿದೆ.
ಈ ಹಿನ್ನೆಲೆಯಲ್ಲಿ ಕೀವ್ ನಗರದಲ್ಲಿ ಇರುವ ಭಾರತೀಯರು ಆದಷ್ಟು ಬೇಗ ನಿರ್ಗಮಿಸುವಂತೆ ರಾಯಭಾರ ಕಚೇರಿ ತಿಳಿಸಿದೆ.
ಈ ಕುರಿತು ತ್ವಟ್ವೀಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿ, ರೈಲು ಅಥವಾ ಬೇರೆ ವಾಹನಗಳಲ್ಲಾದರೂ ಸರಿ ಭಾರತೀಯ ನಾಗರಿಕರು ತಕ್ಷಣವೇ ನಿರ್ಗಮಿಸಬೇಕು ಎಂದು ಹೇಳಿದೆ. ಉಕ್ರೇನ್ನಲ್ಲಿ ಇನ್ನೂ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದು, ಈಗಾಗಲೇ ಅನೇಕ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತರಲಾಗಿದೆ.
Advisory to Indians in Kyiv
All Indian nationals including students are advised to leave Kyiv urgently today. Preferably by available trains or through any other means available.
— India in Ukraine (@IndiainUkraine) March 1, 2022
ಕೀವ್ ವಶಕ್ಕೆ ರಷ್ಯಾದ ಹೆಜ್ಜೆ:
ರಷ್ಯಾದ ನೂರಾರು ಯುದ್ಧ ಟ್ಯಾಂಕ್ಗಳು, ಶಸ್ತ್ರಾಸ್ತ್ರ ತುಂಬಿದ ವಾಹನಗಳು ಕೀವ್ನ ವಾಯುವ್ಯ ದಿಕ್ಕಿನಲ್ಲಿ ಜಮಾವಣೆಗೊಂಡಿದ್ದು, ಈ ಕುರಿತು ಸ್ಯಾಟಲೈಟ್ ಫೋಟೋ ಬಿಡುಗಡೆಗೊಳಿಸಿದೆ. ಉಕ್ರೇನ್ ರಾಜಧಾನಿಯನ್ನು ವಶಪಡಿಸಲು ರಷ್ಯಾ ಅಂತಿಮ ಸಿದ್ಧತೆ ಮಾಡಿಕೊಂಡಿದೆ.