ಕೀವ್ ನತ್ತ ಮುನ್ನುಗ್ತಿದೆ ರಷ್ಯಾ ಸೇನೆ: ತಕ್ಷಣ ಹೊರಡುವಂತೆ ನಾಗರಿಕರಿಗೆ ಕರೆ ನೀಡಿದ ಭಾರತೀಯ ರಾಯಭಾರ ಕಚೇರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್​ ರಾಜಧಾನಿ ಕೀವ್​​ನಿಂದ ಸ್ವಲ್ಪ ದೂರದಲ್ಲಿಯೇ ರಷ್ಯಾ ಸೇನಾಪಡೆ ಇದ್ದು, ಶೀಘ್ರವೇ ಭಾರಿ ಪ್ರಮಾಣದ ದಾಳಿ ಮಾಡುವ ಸಾಧ್ಯತೆ ಇದೆ. ಕೀವ್​​ ಸುತ್ತ ರಷ್ಯಾ ಸೇನೆ ಸುತ್ತುವರಿದೆ.
ಈ ಹಿನ್ನೆಲೆಯಲ್ಲಿ ಕೀವ್​ ನಗರದಲ್ಲಿ ಇರುವ ಭಾರತೀಯರು ಆದಷ್ಟು ಬೇಗ ನಿರ್ಗಮಿಸುವಂತೆ ರಾಯಭಾರ ಕಚೇರಿ ತಿಳಿಸಿದೆ.
ಈ ಕುರಿತು ತ್ವಟ್ವೀಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿ, ರೈಲು​ ಅಥವಾ ಬೇರೆ ವಾಹನಗಳಲ್ಲಾದರೂ ಸರಿ ಭಾರತೀಯ ನಾಗರಿಕರು ತಕ್ಷಣವೇ ನಿರ್ಗಮಿಸಬೇಕು ಎಂದು ಹೇಳಿದೆ. ಉಕ್ರೇನ್​​ನಲ್ಲಿ ಇನ್ನೂ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದು, ಈಗಾಗಲೇ ಅನೇಕ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತರಲಾಗಿದೆ.

 

ಕೀವ್ ವಶಕ್ಕೆ ರಷ್ಯಾದ ಹೆಜ್ಜೆ:
ರಷ್ಯಾದ ನೂರಾರು ಯುದ್ಧ ಟ್ಯಾಂಕ್​​ಗಳು, ಶಸ್ತ್ರಾಸ್ತ್ರ ತುಂಬಿದ ವಾಹನಗಳು ಕೀವ್​​ನ ವಾಯುವ್ಯ ದಿಕ್ಕಿನಲ್ಲಿ ಜಮಾವಣೆಗೊಂಡಿದ್ದು, ಈ ಕುರಿತು ಸ್ಯಾಟಲೈಟ್ ಫೋಟೋ ಬಿಡುಗಡೆಗೊಳಿಸಿದೆ. ಉಕ್ರೇನ್​ ರಾಜಧಾನಿಯನ್ನು ವಶಪಡಿಸಲು ರಷ್ಯಾ ಅಂತಿಮ ಸಿದ್ಧತೆ ಮಾಡಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!