ಅಮೆರಿಕದ ಡ್ರೋನ್ ಹೊಡೆದುರುಳಿಸಿದ‌ ರಷ್ಯಾ ಫೈಟರ್‌ ಜೆಟ್‌: ಶ್ವೇತಭವನ ಪ್ರತಿಕ್ರಿಯೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾದ Su-27 ಫೈಟರ್ ಜೆಟ್ ಕಪ್ಪು ಸಮುದ್ರದ ಮೇಲೆ ಅಮೆರಿಕದ MQ-9 ಡ್ರೋನ್‌ಗೆ ಅಪ್ಪಳಿಸಿತು. ಯುಎಸ್ ಏರ್ ಫೋರ್ಸ್‌ನ MQ-9 ಡ್ರೋನ್ ನಾಶವಾಗಿದೆ. ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ತಮ್ಮ ಡ್ರೋನ್ ಸಾಮಾನ್ಯ ಕಾರ್ಯಾಚರಣೆಗಳನ್ನು ನಡೆಸುತ್ತಿರುವಾಗ ಈ ಘಟನೆ ನಡೆದಿದೆ ಎಂದು ಅಮೆರಿಕ ವಾಯುಪಡೆ ತಿಳಿಸಿದೆ.

ಈ ಬಗ್ಗೆ ರಷ್ಯಾದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ತಮ್ಮ ಕಾರ್ಯಾಚರಣೆ ಮುಂದುವರಿಯಲಿದೆ ಮತ್ತು ಸುರಕ್ಷಿತ ಕಾರ್ಯವಿಧಾನಗಳನ್ನು ಅನುಸರಿಸಬೇಕು ಎಂದು ಅವರಿಗೆ ತಿಳಿಸಿದ್ದೇವೆ ಎಂದರು. MQ-9 ಡ್ರೋನ್ ಕಪ್ಪು ಸಮುದ್ರದ ವಾಯುಪ್ರದೇಶದಲ್ಲಿದ್ದಾಗ ರಷ್ಯಾದ ಎರಡು Su-27 ಫೈಟರ್ ಜೆಟ್‌ಗಳು ಅಜಾಗರೂಕತೆಯಿಂದ ಸಮೀಪಿಸಿದವು. ಇದು ರಷ್ಯಾದ ಅಸಮರ್ಥತೆ ಮತ್ತು ಅಭದ್ರತೆಯನ್ನು ತೋರಿಸುತ್ತದೆ ಎಂದು ಯುಎಸ್ ಏರ್ ಫೋರ್ಸ್ ಅಧಿಕಾರಿಗಳು ಹೇಳಿದ್ದಾರೆ.

ಇಂತಹ ದುಷ್ಕೃತ್ಯಗಳು ಉದ್ವಿಗ್ನತೆಗೆ ಕಾರಣವಾಗುತ್ತವೆ ಎಂದು ಎಚ್ಚರಿಸಿದರು. ಏತನ್ಮಧ್ಯೆ, ರಷ್ಯಾ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿದ್ದಾಗ ಇಂತಹ ಘಟನೆ ನಡೆದಿರುವುದು ಗಮನಾರ್ಹ. ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದಾಗಿನಿಂದ, ಯುದ್ಧ ವಿಮಾನಗಳು ಕಪ್ಪು ಸಮುದ್ರದ ಮೇಲೆ ಆಗಾಗ್ಗೆ ಸುತ್ತುತ್ತವೆ.

ರಷ್ಯಾದಲ್ಲಿ ಯುಎಸ್ ರಾಯಭಾರಿಯಾಗಿರುವ ಲಿನ್ ಟ್ರೇಸಿ “ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ”. ಈ ಘಟನೆಯು ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!