Thursday, March 30, 2023

Latest Posts

ಯುದ್ಧ ವಿಮಾನದಲ್ಲಿನ ಮಹತ್ವದ ಉಪಕರಣ ‘ಪಿಟಿಒ’ ಪರೀಕ್ಷೆ ಯಶಸ್ವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುದ್ಧ ವಿಮಾನದಲ್ಲಿನ ಮಹತ್ವದ ಉಪಕರಣ ಪವರ್ ಟೇಕ್ ಆಫ್(ಪಿಟಿಒ) ಪರೀಕ್ಷೆಯನ್ನು ತೇಜಸ್‌ನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಯುದ್ಧ ವಿಮಾನದ ಅತಿ ಮುಖ್ಯ ಅಂಶ ಇದಾಗಿದ್ದು, ಪಿಟಿಒ ಉಪಕರಣವು ವಿಮಾನದ ಎಂಜಿನ್‌ನಿಂದ ಗೇರ್‌ಬಾಕ್ಸ್‌ಗೆ ವಿದ್ಯುತ್‌ನ್ನು ಪ್ರವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಈ ಉಪಕರಣವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಚೆನ್ನೈನ ಯುದ್ಧ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ದೇಶೀಯವಾಗಿ ವಿನ್ಯಾಸ ಮಾಡಲಾಗಿದೆ. ಪಿಟಿಒ ಪರೀಕ್ಷೆ ಯಶಸ್ವಿಯಾಗಿರುವುದರಿಂದ ಮುಂದಿನ ದಿನದಲ್ಲಿ ಯುದ್ಧ ವಿಮಾನಗಳಿಗೆ ಸ್ಪರ್ಧಾತ್ಮಕ ದರದಲ್ಲಿ ಇದನ್ನು ಪೂರೈಸಲು ಸಾಧ್ಯವಾಗಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!