ಉಕ್ರೇನ್‌ನ 65 ಯುದ್ಧ ಕೈದಿಗಳಿದ್ದ ರಷ್ಯಾ ವಿಮಾನ ಪತನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನಿಯನ್ ಗಡಿಯ ಬಳಿ 65 ಮಂದಿ ಉಕ್ರೇನ್‌ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್‌-76 ಮಿಲಿಟರಿ ವಿಮಾನವು ಪತನಗೊಂಡಿದೆ.

ಉಕ್ರೇನ್‌ ಹಾಗೂ ರಷ್ಯಾದ ಯುದ್ಧಕೈದಿಗಳ ವಿನಿಮಯದ ನಿಟ್ಟಿನಲ್ಲಿ ಉಕ್ರೇನ್‌ ಯುದ್ಧಕೈದಿಗಳನ್ನು ಇದರಲ್ಲಿ ಸಾಗಿಸಲಾಗುತ್ತಿತ್ತು ಎಂದು ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ರಾಜ್ಯ ಸುದ್ದಿ ಸಂಸ್ಥೆ ಆರ್‌ಐಎ ವರದಿ ಮಾಡಿದೆ.

ವಿಮಾನ ಪತನಗೊಂಡ ಕ್ಷಣದಲ್ಲಿ 65 ಉಕ್ರೇನ್‌ ಯುದ್ಧಕೈದಿಗಳಲ್ಲದೆ, ಅರು ಸಿಬ್ಬಂದಿ ಹಾಗೂ ಇತರ ಮೂವರು ವ್ಯಕ್ತಿಗಳು ಈ ವಿಮಾನದಲ್ಲಿದ್ದರು ಎಂದು ಆರ್‌ಐಎ ತಿಳಿಸಿದೆ.

ಯಾವ ಕಾರಣಕ್ಕೆ ವಿಮಾನ ಪತನಗೊಂಡಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವಿಮಾನದಲ್ಲಿ ಯಾರೆಲ್ಲಾ ಇದ್ದರು ಎನ್ನುವ ಬಗ್ಗೆ ಮಾಹಿತಿಗಳು ಇನ್ನಷ್ಟೇ ತಿಳಿಯಬೇಕಿದೆ. ರ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!