ಭಾರತದಲ್ಲಿ ಕಚೇರಿ ತೆರೆಯಲು ಎದುರು ನೋಡುತ್ತಿದೆ ರಷ್ಯಾದ ಅತಿದೊಡ್ಡ ಕಲ್ಲಿದ್ದಲು ಕಂಪನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ರಷ್ಯಾದ ಅತಿದೊಡ್ಡ ಕಲ್ಲಿದ್ದಲು ಪೂರೈಕೆದಾರ ಕಂಪನಿಯಾಗಿರುವ ಸೈಬೀರಿಯನ್ ಕೋಲ್ ಎನರ್ಜಿ ಕಂಪನಿ (SUEK) ಭಾರತದಲ್ಲಿ ಕಚೇರಿಯನ್ನು ತೆರೆಯಲು ಮಾತುಕತೆ ನಡೆಸುತ್ತಿದೆ, ರಷ್ಯಾ ಮೇಲೆ ಯುರೋಪ್ ವಿಧಿಸಿದ ನಿರ್ಬಂಧಗಳ ನಂತರ ದೇಶವು ಉನ್ನತ ರಫ್ತು ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಅದರ ಸಿಇಒ ಮ್ಯಾಕ್ಸಿಮ್ ಬಾಸೊವ್ ಹೇಳಿದ್ದಾರೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

ಈ ವರದಿಯ ಪ್ರಕಾರ ಸಾಂಪ್ರದಾಯಿಕವಾಗಿ ರಷ್ಯಾದ ಕಲ್ಲಿದ್ದಲಿನ ಸಣ್ಣ ಆಮದುದಾರರಾಗಿರುವ ಭಾರತಕ್ಕೆ ಕಂಪನಿಯ ಸಾಗಣೆಗಳು 2022 ರ ಮೊದಲ ಆರು ತಿಂಗಳಲ್ಲಿ 1.25 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ, ಇದು ಸಂಪೂರ್ಣ 2021 ಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಎಲ್ಲಾ ವ್ಯವಸ್ಥಾಪನಾ ಸವಾಲುಗಳನ್ನು ಪರಿಹರಿಸಿದರೆ ಭಾರತಕ್ಕೆ ಕಲ್ಲಿದ್ದಲು ಪೂರೈಕೆಯನ್ನು ವರ್ಷಕ್ಕೆ 10 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸಬಹುದು ಎಂದು ಬಾಸೊವ್ ಹೇಳಿದ್ದಾರೆ.

“SUEK ಭಾರತದೊಂದಿಗೆ ಸಂಪರ್ಕವನ್ನು ಹೆಚ್ಚಿಸಲು ಆಸಕ್ತಿ ಹೊಂದಿದೆ. ಈ ಹಿಂದೆ ದುಬಾರಿ ಸಾರಿಗೆ ವೆಚ್ಚದ ಪರಿಣಾಮ ರಷ್ಯಾದ ಕಲ್ಲಿದ್ದಲು ಪೂರೈಕೆದಾರರಿಗೆ ಭಾರತವು ಆದ್ಯತೆಯ ಮಾರುಕಟ್ಟೆಯಾಗಿರಲಿಲ್ಲ. ಅದರೆ ಯುರೋಪ್‌ ನಿಂದ ರಷ್ಯಾದ-ವಿರೋಧಿ ನಿರ್ಬಂಧಗಳನ್ನು ಪರಿಚಯಿಸಿರುವುದರಿಂದ ಈ ಪ್ರದೇಶದಲ್ಲಿ ಆಸಕ್ತಿ ಹೆಚ್ಚಿತು, ಸಾಗಣೆಗಳು ಸಾಕಷ್ಟು ವೇಗವಾಗಿ ಬೆಳೆಯುತ್ತಿವೆ. ಕೆಲವು ತಿಂಗಳುಗಳಲ್ಲಿ, ನಾವು ವರ್ಷದಿಂದ ವರ್ಷಕ್ಕೆ 50% ಅಥವಾ ಅದಕ್ಕಿಂತ ಹೆಚ್ಚಿನ ಹೆಚ್ಚಳವನ್ನು ದಾಖಲಿಸಿದ್ದೇವೆ. ರಷ್ಯಾ ವರ್ಷಕ್ಕೆ 5-7 ಮಿಲಿಯನ್ ಟನ್ ಕಲ್ಲಿದ್ದಲನ್ನು ಪೂರೈಸುತ್ತಿದ್ದರೆ, ಈಗ ಅದು ತಿಂಗಳಿಗೆ ಸುಮಾರು 2 ಮಿಲಿಯನ್ ಟನ್‌ಗಳನ್ನು ಪೂರೈಸುತ್ತದೆ” ಎಂದಿದ್ದಾರೆ.

”ಪರಿಸರ ಸ್ನೇಹಿ ಕಲ್ಲಿದ್ದಲನ್ನು ಉತ್ಪಾದಿಸುವ SUEK, ಭವಿಷ್ಯದಲ್ಲಿ ಭಾರತೀಯ ಇಂಧನ ಯೋಜನೆಗಳಲ್ಲಿ ಹೂಡಿಕೆಯನ್ನು ಅನ್ವೇಷಿಸಲಿದೆ, ಜೊತೆಗೆ ಸೈಬೀರಿಯಾದಲ್ಲಿ ಅದರ ಯೋಜನೆಗಳಲ್ಲಿ ನೇರ ಹೂಡಿಕೆಗೆ ಭಾರತೀಯರನ್ನು ಆಹ್ವಾನಿಸುತ್ತದೆ. . ಭಾರತೀಯ ಕಛೇರಿಯ ಪ್ರಾರಂಭದ ನಂತರ, ಕಂಪನಿಯು ಶಕ್ತಿ ಮತ್ತು ಲೋಹಶಾಸ್ತ್ರ ಎರಡರಲ್ಲೂ ಅನೇಕ ಪಾಲುದಾರರೊಂದಿಗೆ ಕೆಲಸ ಮಾಡಲಿದೆ ಮತ್ತು ಭಾರತೀಯ ಕಲ್ಲಿದ್ದಲು ಅಥವಾ ಇಂಧನ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತದೆ.” ಎಂದು ಅವರು ಹೇಳಿದ್ಧಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!