ರಷ್ಯಾ ಹೊಸ ವ್ಯೂಹ ರಚನೆ: ರಕ್ಷಣಾ ಕಾರ್ಯಾಚರಣೆಗಾಗಿ ಡಾಲ್ಫಿನ್‌ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ಎರಡು ತಿಂಗಳಿಂದ ರಷ್ಯಾ ಹಾಗೂ ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಲೇ ಇದೆ. ಉಕ್ರೇನ್‌ ಮಣಿಸಲು ರಷ್ಯಾ ಇನ್ನಿಲ್ಲದ ತಂತ್ರವನ್ನು ಅನುಸರಿಸುತ್ತಿದೆ. ಇದರ ಭಾಗವಾಗಿ ಡಾಲ್ಫಿನ್‌ಗಳಿಗೆ ತರಬೇತಿ ನೀಡಿ ಅವುಗಳನ್ನು ಮಿಲಿಟರಿ ಕಾರ್ಯಾಚರಣೆಗೆ ತರಲು ಸಿದ್ಧತೆ ನಡೆಸಿದೆ. ಕಪ್ಪು ಸಮುದ್ರದಲ್ಲಿನ ರಷ್ಯಾದ ನೌಕಾ ನೆಲೆಯನ್ನು ರಕ್ಷಿಸಲು ಡಾಲ್ಫಿನ್‌ಗಳನ್ನು ನಿಯೋಜಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನೀರೊಳಗಿನ ದಾಳಿಯನ್ನು ಮುಂಚಿತವಾಗಿ ಪತ್ತೆಹಚ್ಚಲು ಡಾಲ್ಫಿನ್ ಸೈನ್ಯವನ್ನು ಬಳಸಲಾಗುತ್ತಿದೆ ಎಂದು ಹೇಳಲಾಗಿದೆ.

2014ರಲ್ಲಿ ಉಕ್ರೇನ್‌ನಿಂದ ಕಪ್ಪು ಸಮುದ್ರವನ್ನು ವಶಪಡಿಸಿಕೊಂಡ ಬಳಿಕ ಸೆವಾಸ್ಟೊಪೋಲ್ ನೌಕಾನೆಲೆ ಮೇಲೆ ಉಕ್ರೇನ್‌ ದಾಳಿ ಮಾಡಲು ಹವಣಿಸುತ್ತಿದೆ. ನೇರವಾಗಿ ದಾಳಿ ಮಾಡಲು ಉಕ್ರೇನ್‌ನಿಂದ ಅಸಾಧ್ಯ, ಸಮುದ್ರದ ಒಳಗಿಂದ ನುಸುಳಿ ನೌಕಾಯಾನ ಮೇಲೆ ಪ್ರಭಾವ ಬೀರುವ ಕಾರಣದಿಂದಾಗಿ ಡಾಲ್ಫಿನ್‌ಗಳಿಗೆ ತರಬೇತಿ ನೀಡುತ್ತಿದ್ದಾರೆ.

ಈ ವಿಚಾರವನ್ನು ಅಮೆರಿಕಾದ ನೇವಲ್ ಇನ್‌ಸ್ಟಿಟ್ಯೂಟ್ ಗುರುವಾರ ಟೈಮ್ ಲ್ಯಾಪ್ಸ್ ಉಪಗ್ರಹ ಸೆರೆಹಿಡಿದ ಚಿತ್ರಣದಲ್ಲಿಎರಡು ಡಾಲ್ಪಿನ್‌ಗಳಿಗೆ ತರಬೇತಿ ನೀಡುತ್ತಿರುವುದು ಗಮನಕ್ಕೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!