Thursday, February 9, 2023

Latest Posts

ಎಸ್. ಆರ್. ವಿಶ್ವನಾಥ್ ಕೊಲೆ ಯತ್ನಕ್ಕೆ ಸಂಚು ಪ್ರಕರಣ: ತನಿಖೆ ರೀ ಓಪನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬೆಂಗಳೂರಿನ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಕೊಲೆ ಯತ್ನಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಮರು ಜೀವ ಬಂದಿದೆ. ಇದರಿಂದ ಆರೋಪಿಗಳಿಗೆ ಸಂಕಷ್ಟ ಎದುರಾಗಿದೆ.
2021 ರ ಡಿಸೆಂಬರ್ ನಲ್ಲಿ ದಾಖಲಾಗಿದ್ದ ಕೇಸ್ ನಂತರ ಮುಚ್ಚಿ ಹೋಗಿತ್ತು, ಇದೀಗ ಪ್ರಕರಣ ತನಿಖೆಯನ್ನು ರಾಜಾನುಕುಂಟೆ ಪೊಲೀಸರು ಕೈಗೊಂಡಿದ್ದಾರೆ.
ಹಳೇ ಪ್ರಕರಣ ಮರು ತನಿಖೆಗೆ ಕೋರ್ಟ್ ಆದೇಶ ನೀಡಿದ್ದು, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ಗೆ ಸಂಕಷ್ಟ ಎದುರಾಗಿದೆ.
ಮರು ತನಿಖೆಗೆ ಆಗ್ರಹಿಸಿ ಶಾಸಕ ಎಸ್ ಆರ್ ವಿಶ್ವನಾಥ್ ಪಿಎಸಿಆರ್ ಹಾಕಿದ್ದು, ಕೋರ್ಟ್ ಮರು ತನಿಖೆಗೆ ಆದೇಶಿಸಿದೆ. ಸದ್ಯ, ಕುಳ್ಳ ದೇವರಾಜ್ ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!