Sunday, December 10, 2023

Latest Posts

ಮಂಕಿಪಾಕ್ಸ್‌ಗೆ ‘mpox’ ಎಂದು ಮರುನಾಮಕರಣ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಕಿಪಾಕ್ಸ್‌ಗೆ mpox ಎಂದು ವಿಶ್ವ ಆರೋಗ್ಯ ಸಂಸ್ಥೆ ಮರುನಾಮಕರಣ ಮಾಡಿದೆ.
ಮಂಕಿಪಾಕ್ಸ್‌ಗೆ ಸಮಾನಾರ್ಥವಾಗಿ mpox ಎಂಬ ಹೊಸ ಆದ್ಯತೆಯ ಪದವನ್ನು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ರೋಗದ ಹೆಸರಿನ ಸುತ್ತ ಜನಾಂಗೀಯಯ ಮತ್ತುಕಳಂಕಿತ ಭಾಷೆಯ ವರದಿ ಹಿನ್ನೆಲೆ ಈ ಹೆಸರನ್ನು ಇಡಲಾಗಿದೆ.

ಮಂಕಿಪಾಕ್ಸ್ ಹೆಸರನ್ನು ಹಂತಹಂತವಾಗಿ ತೆಗೆದುಹಾಕಲು ಮೊದಲ ಒಂದು ವರ್ಷದವರೆಗೆ ಎರಡೂ ಹೆಸರನ್ನು ಏಕಕಾಲದಲ್ಲಿ ಬಳಸಲಾಗುತ್ತದೆ. ಏಕಾಏಕಿ ಹೆಸರು ಬದಲಾವಣೆಯಿಂದ ಉಂಟಾಗುವ ತೊಂದರೆಗಳನ್ನು ತಗ್ಗಿಸಲು ಈ ರೀತಿ ಮೊದಲು ಒಂದು ವರ್ಷ ಎರಡೂ ಹೆಸರನ್ನು ಬಳಸಲಾಗುತ್ತದೆ.

ಇದೊಂದು ಅಪರೂಪದ ವೈರಲ್ ಕಾಯಿಲೆಯಾಗಿದ್ದು, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯ ಮಳೆಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ. ಆದರೆ ಈ ವರ್ಷ ಇದಿಷ್ಟೇ ಜಾಗವಲ್ಲದೆ, ಇತರ ಭಾಗಗಳಲ್ಲಿಯೂ ಮಂಕಿ ಪಾಕ್ಸ್ ಕಾಣಿಸಿದೆ. ವಿಶ್ವಾದ್ಯಂತ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿವೆ. 55ಮಂದಿ ಇದಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಾರೆ 110 ದೇಶಗಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ ಎನ್ನಲಾಗಿದೆ.

ವಿಶ್ವಸಂಸ್ಥೆ ಮಂಕಿಪಾಕ್ಸ್ ಮರುನಾಮಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಾರ್ವಜನಿಕ ಮತ್ತು ಖಾಸಗಿ ಹಲವಾರು ಸಭೆಗಳಲ್ಲಿ ಹಲವಾರು ನಾಯಕರು ಹಾಗೂ ದೇಶಗಳು ಮಂಕಿಪಾಕ್ಸ್ ಹೆಸರು ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ್ದವು ಎಂದು ಹೇಳಿದೆ.

ಡಬ್ಲೂಎಚ್‌ಒ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಸಲಹಾ ಪ್ರಕ್ರಿಕೆ ಮೂಲಕ ಕ್ಲಾಸಿಫಿಕೇಷನ್ ಆಫ್ ಡಿಸೀಸ್ ಮತ್ತು ಡಬ್ಲೂಎಚ್‌ಪ ಫ್ಯಾಮಿಲಿ ಆಫ್ ಇಂಟರ್ನಾಷನಲ್ ಹೆಲ್ತ್ ಸಂಬಂಧಿತ ವರ್ಗೀಕರಣದಲ್ಲಿ ಹೆಸರು ಬದಲಾವಣೆ ಆಗಲಿದೆ. ಅದರಂತೆ ಹೊಸ ಹೆಸರುಗಳಿಗೆ ಸಲಹೆ ಸಲ್ಲಿಸಲು ಆಹ್ವಾನಿಸಲಾಗಿತ್ತು.

ಡಬ್ಲೂಎಚ್‌ಒ ಡೈರೆಕ್ಟರ್ ಜನರಲ್ ಡಾ. ಟೆಡ್ರೂಸ್ ಅಧಾನೊಮ್ ಘೆಬ್ರೆಯೆಸಸ್ ಅವರ ಜೊತೆ ಚರ್ಚೆ ನಂತರ ಒಂದು ವರ್ಷದ ಪರಿವರ್ತನೆ ಅವಧಿ ನಂತರ ಮಂಕಿಪಾಕ್ಸ್‌ಗೆ mpox ನೂತನ ಹೆಸರು ಇಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!