June 15, 2026
Monday, June 15, 2026
spot_img

SA20 ವರ್ಸಸ್ BBL: ವೇತನ ಸಮರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗೆ ತಲೆನೋವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಟೂರ್ನಿ ‘ಬಿಗ್ ಬ್ಯಾಷ್ ಲೀಗ್’ (BBL) ಅನ್ನು ಖಾಸಗೀಕರಣಗೊಳಿಸುವ ಕ್ರಿಕೆಟ್ ಆಸ್ಟ್ರೇಲಿಯಾ ಆಸೆಗೆ ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ (ACA) ತಾತ್ಕಾಲಿಕ ಬ್ರೇಕ್ ಹಾಕಿದೆ. ನಿಯಮಗಳ ಪ್ರಕಾರ ಆಟಗಾರರ ಸಂಘದ ಒಪ್ಪಿಗೆಯಿಲ್ಲದೆ ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ACA ಸ್ಪಷ್ಟಪಡಿಸಿದೆ.

ವೇತನ ತಾರತಮ್ಯವೇ ಮುಖ್ಯ ಕಾರಣ

ಆಸೀಸ್ ಆಟಗಾರರ ಈ ಆಕ್ರೋಶಕ್ಕೆ ಜಾಗತಿಕ ಟಿ20 ಮಾರುಕಟ್ಟೆಯಲ್ಲಿನ ವೇತನ ತಾರತಮ್ಯವೇ ಮೂಲ ಕಾರಣ. ಬಿಬಿಎಲ್ ಡ್ರಾಫ್ಟ್‌ನಲ್ಲಿ ಭಾಗವಹಿಸುವ ವಿದೇಶಿ ಆಟಗಾರರಿಗೆ ಗರಿಷ್ಠ 4.20 ಲಕ್ಷ ಆಸ್ಟ್ರೇಲಿಯನ್ ಡಾಲರ್ ಸಿಗುತ್ತಿದ್ದರೆ, ಸ್ಥಳೀಯ ಆಸೀಸ್ ಸ್ಟಾರ್ ಆಟಗಾರರಿಗೆ ಸಿಗುತ್ತಿರುವುದು ಕೇವಲ 2 ಲಕ್ಷ ಆಸ್ಟ್ರೇಲಿಯನ್ ಡಾಲರ್ ಮಾತ್ರ! ಈ ಅಸಮಾನತೆ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ವಿದೇಶಿ ಲೀಗ್‌ಗಳ ಬಿಗ್ ಆಫರ್

ಸದ್ಯ ಸೌತ್ ಆಫ್ರಿಕಾ ಮತ್ತು ಯುಎಇ ಲೀಗ್‌ಗಳು ಕ್ರಿಕೆಟಿಗರಿಗೆ ಭಾರಿ ಮೊತ್ತವನ್ನು ನೀಡುತ್ತಿವೆ. SA20 ಲೀಗ್‌ನಲ್ಲಿ ಪ್ರಮುಖ ಆಟಗಾರರು ಬರೋಬ್ಬರಿ 13 ಲಕ್ಷ ಆಸ್ಟ್ರೇಲಿಯನ್ ಡಾಲರ್ ವರೆಗೆ ಸಂಪಾದಿಸುತ್ತಿದ್ದಾರೆ. ಇದು ಬಿಬಿಎಲ್ ವೇತನಕ್ಕಿಂತ 4 ರಿಂದ 5 ಪಟ್ಟು ಹೆಚ್ಚಾಗಿದೆ.

ACA ಡಿಮ್ಯಾಂಡ್ ಏನು?

BBL ತನ್ನ ಸ್ಯಾಲರಿ ಕ್ಯಾಪ್ ಹೆಚ್ಚಿಸದಿದ್ದರೆ, ಡಿಸೆಂಬರ್-ಜನವರಿ ಅವಧಿಯಲ್ಲಿ ಆಸೀಸ್ ಆಟಗಾರರು ವಿದೇಶಿ ಲೀಗ್‌ಗಳತ್ತ ಮುಖ ಮಾಡಲಿದ್ದಾರೆ. ಹೀಗಾಗಿ, ಖಾಸಗೀಕರಣದ ಮುನ್ನ ಆಟಗಾರರ ವೇತನದ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ACA ಪಟ್ಟು ಹಿಡಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !