ಶಬರಿಮಲೆಯಲ್ಲಿ ಮಂಡಲ ಮಹೋತ್ಸವ: ಅಯ್ಯಪ್ಪ ಸ್ವಾಮಿ ಗರ್ಭಗುಡಿಯ ಬಾಗಿಲು ತೆರೆದ ಅರ್ಚಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದಲ್ಲಿ ಮಂಡಲ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಶ್ರೀ ಕ್ಷೇತ್ರದ ತಂತ್ರಿವರ್ಯ ಕಂಠರರ್ ರಾಜೀವರ್ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಪಿ.ಎನ್.ಮಹೇಶ್ ನಂಬೂದಿರಿ ಅವರು ಗರ್ಭಗುಡಿಯ ಬಾಗಿಲು ತೆರೆದು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಶನಿವಾರದಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 29ರವರೆಗೆ ಶಬರಿಮಲೆಯಲ್ಲಿ ದರ್ಶನಕ್ಕಾಗಿ ವರ್ಚುವಲ್ ಕ್ಯೂ ಬುಕ್ಕಿಂಗ್ ಪೂರ್ಣಗೊಂಡಿದೆ. ದಿನಕ್ಕೆ 70,000 ಸಂದರ್ಶಕರಿಗೆ ವರ್ಚುವಲ್ ಕ್ಯೂ ಬುಕಿಂಗ್ ಸೌಲಭ್ಯವು ಈಗ ಲಭ್ಯವಿದೆ. 10 ಸಾವಿರ ಜನರಿಗೆ ಸ್ಪಾಟ್ ಬುಕ್ಕಿಂಗ್ ಸೌಲಭ್ಯ ಇರಲಿದೆ ಎಂದು ಶಬರಿಮಲೆ ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.

ಕಟ್ಟ ಸಮೇತ ಬರುವ ಭಕ್ತರೂ ವಾಪಸ್ ಹೋಗದಂತೆ ನೋಡಿಕೊಳ್ಳಲಾಗಿದೆ ಎಂದು ದೇವಸ್ವಂ ಮಂಡಳಿ ತಿಳಿಸಿದೆ.

ಶಬರಿಮಲೆ ದೇವಸ್ಥಾನವು ಪ್ರತಿವರ್ಷ ಮಂಡಲ ಪೂಜೆಗಾಗಿ ತೆರೆಯುತ್ತದೆ. ಇಂದಿನಿಂದ ವಾರ್ಷಿಕ ತೀರ್ಥಯಾತ್ರೆಯ ಭಾಗವಾದ ಮಂಡಲಪೂಜೆ ಪ್ರಾರಂಭವಾಗಿದೆ. ಶಬರಿಮಲೆಯ ಅಯ್ಯಪ್ಪ ದೇವಾಲಯವು ಮಂಡಲ-ಮಕರವಿಳಕ್ಕು ಋತುವಿಗೆ ತೆರೆಯುತ್ತದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!