ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ಜಯಂ ರವಿ ಪತ್ನಿ ಆರತಿಯಿಂದ ವಿಚ್ಛೇದನ ಪಡೆಯುವುದಾಗಿ ಎರಡು ತಿಂಗಳ ಹಿಂದೆ ಘೋಷಿಸಿದ್ದು , ಕುಟುಂಬದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿಕೆ ನೀಡಿದ್ದರು.
ಆದ್ರೆ ಜಯಂ ರವಿ ಜೊತೆ ಮತ್ತೆ ಒಂದಾಗಿ ಬಾಳಲು ಇಚ್ಛಿಸುವುದಾಗಿ ಆರತಿ ಹೇಳಿಕೆ ನೀಡಿದ್ದರು. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಜಯಂ ರವಿ ಆರತಿ ಮೇಲೆ ಹಲವು ಆರೋಪಗಳನ್ನು ಮಾಡಿದ್ದರಿಂದ ಇಬ್ಬರೂ ಒಂದಾಗುವುದು ಕಷ್ಟ ಎನ್ನಲಾಗಿತ್ತು.
ಈ ವಿಚಾರ ಸುದ್ದಿಯಾಗುತ್ತಿದ್ದಂತೆ, ವಿಚ್ಛೇದನ ಪ್ರಕರಣ ಚೆನ್ನೈ ಕೌಟುಂಬಿಕ ನ್ಯಾಯಾಲಯಕ್ಕೆ ಹೋಗಿದೆ. ನ್ಯಾಯಾಲಯವು ಇಬ್ಬರೂ ಸಂಧಾನ ಮಾತುಕತೆ ನಡೆಸುವಂತೆ ಆದೇಶಿಸಿದೆ.