ದೇಹಕ್ಕೆ ತಂಪು ನೀಡುವ ಸಬ್ಬಕ್ಕಿ ರೊಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿದಿನ ಬೆಳಗ್ಗೆ ತಿಂಡಿ ಪ್ರಿಪೇರ್‌ ಮಾಡುವುದೇ ಒಂದು ದೊಡ್ಡ ತಲೆನೋವು. ಸಾಮಾನ್ಯವಾಗಿ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ತಿಂಡಿಯನ್ನು ಬಯಸೋದು ಸಹಜ. ಆದ್ರೆ ರೊಟ್ಟಿಗೆ ಮಾತ್ರ ಮತ್ತೊಂದು ಆಯ್ಕೆ ಇಲ್ಲ. ಯಾಕಂದ್ರೆ ರೊಟ್ಟಿ ಇಷ್ಟ ಪಡದವರೇ ಇಲ್ಲ. ಈ ಬಿರು ಬೇಸಿಗೆಯಲ್ಲಿ ಸಬ್ಬಕ್ಕಿ ರೊಟ್ಟಿ ಮಾಡಿದ್ರೆ ದೇಹ ತಂಪಾಗಿಡಲು ಸಹಕಾರಿಯಾಗುತ್ತದೆ.

ಬೇಕಾಗುವ ಪದಾರ್ಥಗಳು

ಒಂದು ಕಪ್‌ ಸಬ್ಬಕ್ಕಿ
ಸಣ್ಣಗೆ ಹೆಚ್ಚಿದ ಈರುಳ್ಳಿ
ಹೆಚ್ಚಿದ ಕೊತ್ತಂಬರಿ, ಕರಿಬೇವಿನ ಸೊಪ್ಪು
ಒಂದು ಬೇಯಿಸಿದ ಆಲೂ
ಅರ್ಧ ಕಪ್‌ ಅಕ್ಕಿ ಹಿಟ್ಟು
ತರಿ ತರಿಯಾಗಿ ಪುಡಿ ಮಾಡಿದ ಕಡಲೆ ಬೀಜ
ಹೆಚ್ಚಿದ ಹಸಿಮೆಣಸಿನಕಾಯಿ
ಒಂದು ಚಮಚ ಜೀರಿಗೆ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಒಂದು ಬಟ್ಟಲಿನಲ್ಲಿ ನೀರು ಹಾಕಿ ಎರಡು ಗಂಡೆಗಳ ಕಾಲ ಸಬ್ಬಕ್ಕಿ ನೆನೆಸಿ. ಬಳಿಕ ನೀರನ್ನು ಬಸಿದು ಸಬ್ಬಕ್ಕಿಯನ್ನು ಕೈಯಲ್ಲೀ ಪುಡಿ ಮಾಡಿ. ಅದಕ್ಕೆ ಮೇಲೆ ನೀಡಿದ ಎಲ್ಲಾ ಪದಾರ್ಥಗಳನ್ನು ಹಾಕಿ ಹದವಾಗಿ ಮಿಶ್ರಣ ಮಾಡಿ. ಒಲೆ ಮೇಲೆ ತವಾ ಇಟ್ಟು ಬಾಳೆ ಎಲೆ ಅಥವಾ ಪೇಪರ್‌ ಮೇಲೆ ಚೆಂಡಿನ ಗಾತ್ರದ ಹಿಟ್ಟು ತೆಗೆದುಕೊಂಡು ಅಗಲವಾಗಿ ತಟ್ಟಿ ಎಂಚಿನ ಮೇಲೆ ಹಾಕಿ. ಎರಡೂ ಬದಿ ಎಣ್ಣೆ, ತುಪ್ಪ ಹಾಕಿ ಬೇಯಿಸಿ ಚಟ್ನಿಯೊಂದಿಗೆ ಸರ್ವ್‌ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!