ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಆಗ್ರಹಿಸಿ ಶ್ರೀರಾಮಸೇನೆ ಕಾರ್ಯಕರ್ತರ ಪ್ರತಿಭಟನೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಸೋಮವಾರ ಶ್ರೀರಾಮ ಸೇನಾ ಕಾರ್ಯಕರ್ತರ ನಗರದಲ್ಲಿ ಬೆಳಗ್ಗೆ ಕೆಲವು ದೇವಸ್ಥಾಗಳಲ್ಲಿ ಧ್ವನಿವರ್ಧಕಳ ಬಳಸಿ ಸುಪ್ರಭಾತ, ಭಜನೆ ಮತ್ತು ಪೂಜೆ ಮಾಡಿ ಪ್ರತಿಭಟನೆ ನಡೆಸಿದರು.

ಇಲ್ಲಿಯ ಸಿದ್ಧಾರೂಢ ಮಠ, ಜಂಗ್ಲಿಪೇಟೆ ಬಸವಣ್ಣ ಗುಡಿ, ಕಲ್ಮೇಶ್ವರ ನಗರದ ಬನ್ನಿಮಹಾಕಾಳಿ ದೇವಸ್ಥಾನ ಹಾಗೂ ಇತ್ತೀಚೆಗೆ ಗಲಭೆ ನಡೆದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಸನಿಹದ ದಿಡ್ಡಿ ಹನುಮಪ್ಪ ದೇವಸ್ಥಾನದಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು ಧ್ವನಿವರ್ಧಕ ಬಳಸಿ ಸುಪ್ರಭಾತ, ಹನುಮಾನ ಚಾಲಿಸ್ ಮತ್ತು ಭಜನೆ ಮಾಡಿದರು.

20 ಮಂದಿಯ ಎರಡು ತಂಡ ರಚಿಸಿಕೊಂಡು ನಗರದ ನಾಲ್ಕು ದೇವಸ್ಥಾನಗಳಲ್ಲಿ ಬೆಳಿಗ್ಗೆ 5 ರಿಂದ 6 ರವರೆಗೆ ಧ್ವನಿವರ್ಧಕದ ಮೂಲಕ ಭಜನೆ ಮಾಡಿದ್ದಾರೆ. ಸುಪ್ರೀ ಕೋರ್ಟ್ ಆದೇಶವಿದ್ದರು ರಾಜ್ಯದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುತ್ತಿದ್ದಾರೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡಿದಲ್ಲ. ಆದರರಿಂದ ಶ್ರೀರಾಮ ಸೇನೆ ಸೋಮವಾರ(ಮೇ 9) ತೆರವುಗೊಳಿಸಲು ಗಡುವು ನೀಡಿತ್ತು. ಸರ್ಕಾರ ಪೊಲೀಸ್ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ದೇವಸ್ಥಾನಗಳಲ್ಲಿ ಧ್ವನಿವರ್ಧಗಳ ಮೂಲಕ ಹೊರಹೊಮ್ಮಿಸಲಾಗಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!