ಸೇಫ್ ಲಾಕರ್ ಗೆ ಕನ್ನ ಪ್ರಕರಣ: ಗ್ರಾಹಕರಿಗೆ ಮತ್ತೆ ಸೇವೆ ಆರಂಭಿಸಿದ ಅಡ್ಯನಡ್ಕ ಕರ್ಣಾಟಕ ಬ್ಯಾಂಕ್

ಹೊಸದಿಗಂತ ವರದಿ ಮಂಗಳೂರು:

ಸೇಫ್ ಲಾಕರ್ ಗೆ ಕನ್ನ ಬಿದ್ದ ಬಳಿಕ ಸ್ಥಗಿತಗೊಂಡಿದ್ದ ಅಡ್ಯನಡ್ಕ ಕರ್ಣಾಟಕಾ ಬ್ಯಾಂಕ್ ಅಡ್ಯನಡ್ಕ ಶಾಖೆ ಮಂಗಳವಾರದಿಂದ ಮತ್ತೆ ಗ್ರಾಹಕರಿಗೆ ಅಗತ್ಯ ಸೇವೆ ನೀಡಲು ಮುಂದಾಗಿದೆ.

ಬ್ಯಾಂಕ್ ನಲ್ಲಿ ಕಳ್ಳತನ ಪ್ರಕರಣ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಆ ದಿನ ಪೊಲೀಸ್ ತನಿಖೆಯಿಂದ ಯಾವುದೇ ದುರಸ್ಥಿ ಕಾರ್ಯವನ್ನು ನಡೆಸಲಾಗಿರಲಿಲ್ಲ. ಶುಕ್ರವಾರ ಬೆಳಗ್ಗಿನಿಂದ ಅಗತ್ಯ ಸಿದ್ದತೆಗಳನ್ನು ನಡೆಸಿಕೊಂಡು ರಾತ್ರಿ ಭದ್ರತಾ ಕೋಶದ ಬಾಗಿಲನ್ನು ತೆರವು ಮಾಡಲಾಯಿತು. ಆ ಬಳಿಕ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕಾಮಗಾರಿಗಳನ್ನು ನಡೆಸಿ ಕಟ್ಟಡವನ್ನು ಸುಭದ್ರಗೊಳಿಸುವ ಕಾರ್ಯವನ್ನು ರಜಾ ದಿನಗಳನ್ನೂ ಲೆಕ್ಕಿಸಿದೆ ಮಾಡಲಾಗಿತ್ತು. ಸೋಮವಾರವೂ ಕೆಲಸ ಮುಂದುವರಿದಿದ್ದು, ಗ್ರಾಹಕರಿಗೆ ಸೇವೆಯನ್ನು ನೀಡಿರಲಿಲ್ಲ. ಮಂಗಳವಾರ ಎಂದಿನಂತೆ ಗ್ರಾಹಕರಿಗೆ ಸೇವೆಯನ್ನು ಪ್ರಾರಂಭಿಸಿದೆ.

ಕಳ್ಳರ ಪತ್ತೆ ಸವಾಲು!
ಅಡ್ಯನಡ್ಕ ಪೇಟೆಯಲ್ಲಿ ಕೆಲವು ದಿನಗಳಿಂದ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳ ಮಾಹಿತಿಯನ್ನು ವಶಕ್ಕೆ ಪಡೆದ ವ್ಯಕ್ತಿಗಳಿಂದ ಸಂಗ್ರಹಿಸಿ ಮೊಬೈಲ್ ಬಳಕೆಯ ಆಧಾರದಲ್ಲಿ ಅನುಮಾನಿತರ ಪತ್ತೆಗೆ ಪ್ರಯತ್ನಗಳು ನಡೆದಿದೆ ಎಂದು ಇಲಾಖೆಯ ಅಧಿಕಾರಿಗಳ ಮಾತಾದರೆ, ಕೆಲವು ಮೂಲಗಳ ಪ್ರಕಾರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಕೆಲವು ಅಧಿಕಾರಿಗಳ ಪ್ರಕಾರ ಆರೋಪಿಗಳ ಪತ್ತೆ ಕಾರ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಅಂತರ್ ರಾಜ್ಯ ಕಳ್ಳರೇ?
ಈ ಹಿಂದೆ ಬ್ಯಾಂಕ್ ಕಳ್ಳತನಕ್ಕೆ ಪ್ರಯತ್ನ ಪಟ್ಟವರು ಜೈಲಿನಿಂದ ಹೊರ ಬಂದ ಸಮಯದಲ್ಲಿ ಈ ಪ್ರಕರಣ ನಡೆದಿರುವ ಸಾಧ್ಯತೆ ಇದೆಯಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಬಂಧನದಲ್ಲಿದ್ದು, ಜೈಲಿನಿಂದ ತಿಂಗಳ ಒಳಗಾಗಿ ಹೊರ ಬಂದಿರುವವರ ಮಾಹಿತಿ ಸಂಗ್ರಹಿಸಿ ತನಿಖೆಯನ್ನು ಇಲಾಖೆ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!