STORY | 24 ವರ್ಷದ ಯುವಕ ಶಾಪಿಂಗ್ ಮಾಲ್ ನೋಡಿ ಖುಷಿಯಿಂದ ಕೈ ಬಡಿದು ನಕ್ಕ

ಬೆಂಗಳೂರಿನ ದೊಡ್ಡ ಮಾಲ್ ಒಂದನ್ನು ನೋಡಿ, ೨೪ ವರ್ಷದ ಯುವಕನೊಬ್ಬ ಸಿಕ್ಕಾಪಟ್ಟೆ ಎಕ್ಸೈಟ್ ಆದ. ಕೈ ಬಡಿದು ನಗುತ್ತಾ ಚಪ್ಪಾಳೆ ತಟ್ಟಿದ. ಅಮ್ಮ ಅಲ್ ನೋಡಿ ಎಷ್ಟ್ ಲೈಟ್ಸ್ ಇದೆ, ಅಮ್ಮ ಇಲ್ ನೋಡಿ ಫೌಂಟೇನ್‌ನಿಂದ ನೀರ್ ಬರ್ತಿದೆ, ಅಮ್ಮ ಎಷ್ಟೊಂದ್ ಬಟ್ಟೆ ಅಂಗಡಿ ಅಂತ ಜೋರಾಗ್ ಮಾತಾಡ್ತಿದ್ದ.

ಸಿನಿಮಾ ನೋಡೋಕೇ ಬಂದಿದ್ದ ಸಿಟಿ ಟೀನೇಜರ‍್ಸ್ ಗ್ಯಾಂಗ್ ಇವ್ನನ್ ನೋಡಿ ವಿಚಿತ್ರವಾಗ್ ಮುಖ ಮಾಡಿದ್ರು. ಒಂದು ಬುದ್ದಿ ಇಲ್ದೇ ಹೀಗ್ ಆಡ್ತಿದಾನೆ, ಇಲ್ವಾ ಹಳ್ಳಿಯಿಂದ ಕೆಂಪ್ ಬಸ್ ಹತ್ಕೊಂಡ್ ಬಂದಿದಾನೆ ಅಂತ ಜೋರಾಗ್ ಆಡ್ಕೊಂಡ್ ನಕ್ರು.

ಯುವಕನ್ ಅಮ್ಮನಿಗೆ ಇಷ್ಟ್ ವಯಸ್ಸಲ್ ಒಳ್ಳೆ ಚಿಕ್ ಮಕ್ಳು ಥರ ಆಡ್ತಾರಲ, ನಿಮ್ ಮಗನ್ ಯಾವ್ದಾದ್ರೂ ಒಳ್ಳೆ ಹಾಸ್ಪಿಟಲ್‌ಗೆ ತೋರ್ಸಿ ಅಂತ ಹೇಳಿ ಹುಡುಗಿಯರು ಜೋರಾಗಿ ನಕ್ರು.

ತಾಯಿ ಅಲ್ವಾ ಬೇಜಾರಾಗೇ ಆಗತ್ತೆ. ನಾವು ಹಾಸ್ಪಿಟಲ್ ಇಂದಾನೇ ಸೀದ ಇಲ್ಲಿಗೆ ಬಂದ್ವಿ. ನನ್ನ ಮಗ ಹುಟ್ಟು ಕುರುಡ, ಕಣ್ಣಿನ ಆಪರೇಷನ್ ಆಗಿ ಇವತ್ತಷ್ಟೇ ಹಾಸ್ಪಿಟಲ್ ಇಂದ ಡಿಸ್ಚಾರ್ಜ್ ಮಾಡಿದಾರೆ. ಅವನು ಜಗತ್ತನ್ನ ನೋಡ್ತಿರದೇ ಇದೇ ಮೊದಲು ಅಂದ್ರು.

ಎಲ್ಲಾರ್ಗೂ ಅವ್ರ್ದೇ ಆದ ಕಥೆ ಇರತ್ತೆ, ಯಾರನ್ನೂ ಒಂದು ಇನ್ಸಿಡೆಂಟ್‌ನಿಂದ ಜಡ್ಜ್ ಮಾಡ್ಬೇಡಿ. ಸತ್ಯ ಗೊತ್ತಾದ್ರೆ ಅದನ್ನು ಹ್ಯಾಂಡಲ್ ಮಾಡೋ ಶಕ್ತಿ ನಿಮ್ಮಲ್ಲಿ ಇರದೇ ಇರಬಹುದು. ಒಬ್ಬರ ಬಟ್ಟೆ, ಊಟ, ಇರೋ ರೀತಿ, ರೂಡಿಸ್ಕೊಂಡಿರೋ ಅಭ್ಯಾಸ ಎಲ್ಲಾದಕ್ಕೂ ಒಂದು ಕಥೆ ಇದ್ದೇ ಇರುತ್ತದೆ. ನಿಮಗೆ ಗೊತ್ತಿಲ್ಲ ಅಷ್ಟೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!