ಸಾಗರ ಕೋಮು ತಲ್ಲಣ: ಮುಸ್ಲಿಂ ಯುವತಿಯನ್ನು ಸುನೀಲ್ ಚುಡಾಯಿಸಿದ್ದ ಅನ್ನೋದು ಆಧಾರವಿಲ್ಲದ ಆರೋಪ ಅಂತು ಬಜರಂಗದಳ

ಹೊಸದಿಗಂತ ವರದಿ, ಶಿವಮೊಗ್ಗ:

ಬಜರಂಗದಳದ ನಗರ ಸಹ ಸಂಚಾಲಕ ಸುನೀಲ್ ಮೇಲೆ ಅನಗತ್ಯವಾಗಿ ಗೂಬೆ ಕೂರಿಸುವ, ಷಡ್ಯಂತ್ರದ ಮೂಲಕ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಂಘ ಪರಿವಾರದ ಹಿರಿಯ ಅ.ಪು. ನಾರಾಯಣಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಂ ಸಮಾಜದ ವತಿಯಿಂದ ಸಮೀರ್ ತಂಗಿ ಮೂಲಕ ಸುನೀಲ್ ತನ್ನನ್ನು ಚುಡಾಯಿಸುತ್ತಿದ್ದ ಎಂದು ಆರೋಪ ಹೊರಿಸುವ ಷಡ್ಯಂತ್ರ ನಡೆಸುತ್ತಿರುವುದನ್ನು ಸಂಘ ಪರಿವಾರ ತೀವ್ರವಾಗಿ ಖಂಡಿಸುತ್ತಿದೆ ಎಂದರು.
ಇಂದಿರಾಗಾಂ ಕಾಲೇಜಿನಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಈ ಪೈಕಿ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಬರುತ್ತಾರೆ. ಇವರಲ್ಲಿ ಸಮೀರ್ ತಂಗಿಯನ್ನು ಹುಡುಕಿಕೊಂಡು  ಸುನೀಲ್ ಚುಡಾಯಿಸುತ್ತಿದ್ದ ಎನ್ನುವುದೇ ನಂಬಲು ಸಾಧ್ಯವಾಗದ ಸಂಗತಿ. ತನ್ನ ಬಳಿ ಮೊಬೈಲ್ ಇಲ್ಲವೆಂದು ಹುಡುಗಿ ಹೇಳುತ್ತಾಳೆ. ಸುನೀಲ್ ತನ್ನ ಅಣ್ಣನ ಬಳಿ ಮೊಬೈಲ್ ನಂ. ಕೇಳಿದ್ದಾನೆ ಎಂದು ಹೇಳುತ್ತಿದ್ದಾಳೆ. ಒಟ್ಟಾರೆ ಪ್ರಕರಣದ ದಿಕ್ಕು ತಪ್ಪಿಸಲು ಸುನೀಲ್ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಸುನೀಲ್ ಜಿಯೋ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿದ್ದಾನೆ. ಆ ಸ್ಥಳಕ್ಕೆ ಸಮೀರ್ ಯಾಕೆ ಹೋಗಿದ್ದಾನೆ. ಸುನೀಲ್ ಚುಡಾಯಿಸುತ್ತಿದ್ದರೂ ಹುಡುಗಿ ತಾಯಿಗೆ, ಪೊಲೀಸರಿಗೆ ಏಕೆ ತಿಳಿಸಲಿಲ್ಲ? ಪೊಲೀಸರು ಈ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ.  ಪ್ರಕರಣ ಮುಚ್ಚಿ ಹಾಕಿ ಸುನೀಲ್‌ನನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಭಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕಾಮತ್, ಹಿಂದೂ ಜಾಗರಣಾ ಸಮಿತಿ ಅಧ್ಯಕ್ಷ ಕೆ.ಎಚ್. ಸುೀಂದ್ರ, ಪ್ರಮುಖರಾದ ನಂದೀಶ್ ಸೂರಗುಪ್ಪೆ, ಕಿರಣ್ ಗೌಡ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!