Sunday, March 26, 2023

Latest Posts

ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯಕರ್ತರ ಅಭ್ಯಾಸ ವರ್ಗ-ಸಮ್ಮೇಳನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯ ಸಹಕಾರಿ ಸಂಸ್ಥೆಗಳ ನಿರ್ದೇಶಕರ, ಸಹಕಾರಿ ನೌಕರರ ಮತ್ತು ಸಂಘಟನೆಯ ಕಾರ್ಯಕರ್ತರ ಅಭ್ಯಾಸ ವರ್ಗ ಮತ್ತು ಸಮ್ಮೇಳನವು ಶನಿವಾರ ಸಂಜೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭವಾಯಿತು.

ಕಾಸರಗೋಡು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಭಟ್ ಕಿದೂರು ಧ್ವಜಾರೋಹಣಗೈದರು. ನಂತರ ಸಹಕಾರ ಭಾರತಿ ಕಾರ್ಯ ಯೋಜನೆಗಳು ಎಂಬ ವಿಷಯದ ಕುರಿತು ಸಹಕಾರ ಭಾರತಿ ಕೇರಳ ಇದರ ಸಂಘಟನಾ ಕಾರ್ಯದರ್ಶಿ ಕೆ.ಆರ್.ಕಣ್ಣನ್ ವಿಷಯ ಮಂಡಿಸಿ ವಿವರಣೆಯನ್ನು ನೀಡಿದರು.

ಸಮಾಜ – ಸಂಘಟನೆ – ಕಾರ್ಯಕರ್ತ ಎಂಬ ವಿಷಯದ ಕುರಿತು ಸಹಕಾರ ಭಾರತಿಯ ಅಖಿಲಭಾರತ ಸಮಿತಿ ಸದಸ್ಯ, ವಕೀಲ ಕೆ.ಕರುಣಾಕರನ್ ನಂಬ್ಯಾರ್ ಮಾತನಾಡಿದರು. ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷ ಗಣೇಶ್ ಪಾರೆಕಟ್ಟೆ, ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು, ಸ್ವಾಗತಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಮಹಿಳಾ ಪ್ರಕೋಷ್ಟ ಪ್ರಮುಖ್ ಶೋಭನಾ ಕಾಞಂಗಾಡು ಮೊದಲಾದವರು ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ವಿಘ್ನೇಶ್ವರ ಕೆದುಕೋಡಿ ಸ್ವಾಗತಿಸಿ, ಮಂಜೇಶ್ವರ ತಾಲೂಕು ಅಧ್ಯಕ್ಷ ಅಶೋಕ ಬಾಡೂರು ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!