Thursday, March 23, 2023

Latest Posts

ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್ ಗೆ ಸಿಕ್ಕಿತು ಅದ್ದೂರಿ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್(WPL 2023)ಗೆ ಅಧಿಕೃತ ಚಾಲನೆ ದೊರೆತಿದೆ.

ಬಾಲಿವುಡ್​ ನಟಿಯರಾದ ಕೃತಿ ಸನೂನ್(Kriti Sanon)​, ಕಿಯಾರ ಆಡ್ವಾನಿ(Kiara Advani) ಮತ್ತು ಭಾರತೀಯ ಮೂಲಕ ಕೆನಡಾದ ಖ್ಯಾತ ಸಿಂಗರ್​ ಎಪಿ ಧಿಲ್ಲೋನ್(AP Dhillon) ಅವರ ಸಮ್ಮುಖದಲ್ಲಿ ನಡೆದ ವರ್ಣರಂಜಿತ ನೃತ್ಯ ಮತ್ತು ಹಾಡುಗಳ ಮೂಲಕ ಟೂರ್ನಿ ಆರಂಭಗೊಂಡಿದೆ.

ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕಾರ್ಯದರ್ಶಿ ಜಯ್​ ಶಾ, ಖಜಾಂಚಿ ಅರುಣ್ ಧುಮಾಲ್ ಸೇರಿದಂತೆ ಹಲವು ಬಿಸಿಸಿಐ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಇನ್ನು ಈ ಸಮಾರಂಭದಲ್ಲಿ ಎಲ್ಲ 5 ತಂಡಗಳ ಆಟಗಾರ್ತಿಯರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!