ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣದ ಹಲವು ವಿಚಾರಗಳು ಹೊರಬರುತ್ತಿದ್ದು, ಈ ಆರೋಪಿಗಳು ನಟ ಶಾರುಖ್ ಖಾನ್ ಜೀವ ತೆಗೆಯಲೂ ಕೂಡ ಸ್ಕೆಚ್ ಹಾಕಿದ್ದರು ಎಂಬ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ.
ನಟ ಸೈಫ್ ಅಲಿ ಖಾನ್ ಅವರಿಗೆ ಚಾಕೂ ಹಾಕಿದ್ದ ಆರೋಪಿ ಜನವರಿ 14ರ ರಾತ್ರಿ ಮುಂಬೈನ ಬಾಂದ್ರಾದಲ್ಲಿರುವ ನಟ ಶಾರುಖ್ ಖಾನ್ ಮನೆಗೆ ಹೋಗಿದ್ದಾನೆ. ಆದರೆ, ಅಲ್ಲಿರುವ ಟೈಟ್ ಸೆಕ್ಯುರಿಟಿ ಕಾರಣಕ್ಕೆ ಅವನಿಗೆ ನಟ ಶಾರುಖ್ ಖಾನ್ ಅವರನ್ನು ಟಚ್ ಮಾಡಲು ಸಾಧ್ಯವೇ ಅಗಲಿಲ್ಲ.
ಬಾಂದ್ರಾದಲ್ಲಿರುವ ನಟ ಶಾರುಖ್ ಖಾನ್ ಮನೆಗೆ 14ನೇ ತಾರೀಖು ಮಧ್ಯರಾತ್ರಿ ಈ ಆರೋಪಿ ನುಗ್ಗಲು ಪ್ರಯತ್ನಿಸಿದ್ದ. ಬಾಂದ್ರಾದ ಮನ್ನತ್‌ಗೆ ಹೋಗಿ ಅಲ್ಲಿ ಏಣಿಯೊಂದರ ಮೂಲಕ ಶಾರುಖ್ ಖಾನ್ ಮನೆಯೊಳಕ್ಕೆ ಹೋಗಲು ಯತ್ನಿಸಿದ್ದ. ಆದರೆ, ಅಲ್ಲಿನ ಸೆಕ್ಯೂರಿಟಿ ಇದನ್ನು ನೋಡಿದ್ದು ಕಂಡು ಭಯಭೀತನಾಗಿ ಅಲ್ಲಿಂದ ಆರೋಪಿ ಕಾಲ್ಕಿತ್ತಿದ್ದ. ಬಳಿಕ, ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಅವರಿಗೆ ಚಾಕೂದಲ್ಲಿ ಇರಿದು ಹೋಗಿದ್ದಾನೆ.
ನಟ ಸೈಫ್ ಅಲಿ ಖಾನ್ ಅವರಿಗೆ ಚಾಕೂ ಹಾಕಿದ್ದ ಆರೋಪಿಯನ್ನು ಬಂಧಿಸಿ ಇದೀಗ ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಬಂಧಿತ ಆರೋಪಿ ಶಾರುಖ್ ಖಾನ್ ಮುಗಿಸಲು ಪ್ಲಾನ್ ಮಾಡಿದ್ದನ್ನು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ತನ್ನ ಡೈರಿಯಲ್ಲಿ ಕೂಡ ಅದನ್ನು ಬರೆದುಕೊಂಡಿದ್ದ. ಇದನ್ನು ಸ್ವತಃ ತನಿಖಾಧಿಕಾರಗಳು ನೋಡಿದ್ದು, ಇದೀಗ ಆರೋಪಿಯ ಹೇಳಿಕೆ ಬಯಲಾಗಿದೆ.
ನಟ ಶಾರುಖ್ ಖಾನ್ ಮನೆಗೆ ನುಗ್ಗಲು ಆರೋಪಿ ಏಣಿಯನ್ನೂ ಹಾಕಿದ್ದ. ಆದರೆ, ಅದನ್ನು ಬಳಸಿ ಹೋಗಲು ಯತ್ನಿಸುತ್ತಿದ್ದ ವೇಳೆ ಅಲ್ಲಿದ್ದ ಸೆಕ್ಯೂರಿಟಿ ಅದನ್ನು ನೋಡಿದ್ದಾನೆ. ಆ ಕೂಡಲೇ ಕಂಗಾಲದ ಆರೋಪಿ ಏಣಿಯನ್ನೂ ಸಹ ಅಲ್ಲೇ ಬಿಟ್ಟು ಅಲ್ಲಿಂದ ಮಿಂಚಿನ ವೇಗದಲ್ಲಿ ಪರಾರಿ ಆಗಿದ್ದಾನೆ. ಬಳಿಕ ಅವನು, ತನ್ನ ಮುಂದಿನ ಟಾರ್ಗೆಟ್ ಆಗಿದ್ದ ನಟ ಸೈಫ್ ಅಲಿ ಖಾನ್ ಮನೆಗೆ ಹೋಗಿ ಅವರನ್ನು ಮುಗಿಸುವ ಸಂಚು ಮಾಡಿದ್ದಾನೆ. ಸೈಫ್‌ಗೆ ಚಾಕು ಹಾಕಿದ್ದಾನೆ, ಆದರೆ ಸೈಫ್ ಅದೃಷ್ಟವಶಾತ್ ಬದುಕಿದ್ದಾರೆ. ಅವರೀಗ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.