Sunday, October 1, 2023

Latest Posts

ಸೈನಾ ನೆಹ್ವಾಲ್ ವಿರುದ್ಧ ಕೀಳುಮಟ್ಟದ ಟ್ವೀಟ್- ಕಾನೂನಿನ ಭಯ ಬರುತ್ತಲೇ ವರಸೆ ಬದಲಿಸಿದ ನಟ ಸಿದ್ಧಾರ್ಥ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲಿಷಿನಲ್ಲಿ ‘ಕಾಕ್’ ಎಂಬ ಬದಕ್ಕೆ ಅಶ್ಲೀಲ ಅರ್ಥವೂ ಸೇರಿದಂತೆ ಹಲವು ಅರ್ಥಗಳಿವೆ. ಇದನ್ನೇ ಬಳಸಿಕೊಂಡು ನಟ ಸಿದ್ಧಾರ್ಥ ಸೈನಾ ನೆಹ್ವಾಲ್ ವಿರುದ್ಧ ‘ಸಟಲ್ ಕಾಕ್ ಆಡುವಾಕೆ’ ಎಂದು ಕೊಂಕಿನ ಟ್ವೀಟ್ ಮಾಡಿದ್ದಾರೆ.

ಅದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ರಾಷ್ಟ್ರೀಯ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಯಿತು. ಇದೀಗ ಸಿದ್ಧಾರ್ಥ, “ನಾನು ಕಾಕ್ ಎಂಬ ಪದ ಬಳಸಿದ್ದು ಕೆಟ್ಟ ಅರ್ಥದಲ್ಲಲ್ಲ” ಎಂದು ವರಸೆ ಬದಲಿಸಿದ್ದಾರೆ.

ನಟ ಸಿದ್ಧಾರ್ಥ್, ಸೈನಾ ನೆಹ್ವಾಲ್ ವಿರುದ್ಧ ಮಾಡಿರುವ ಅವಹೇಳನಾಕಾರಿ ಟ್ವೀಟ್‌ನ್ನು ತಕ್ಷಣವೇ ಬ್ಲಾಕ್ ಮಾಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಟ್ವಿಟರ್‌ಗೆ ಪತ್ರ ಬರೆದಿದೆಯಲ್ಲದೇ, ಮಹಿಳೆಯೊಬ್ಬಳ ಘನತೆಯನ್ನು ತಗ್ಗಿಸಿದ್ದಕ್ಕಾಗಿ ನಟನ ವಿರುದ್ಧ ಮಹಾರಾಷ್ಟ್ರ ಪೊಲೀಸ್ ವಿಚಾರಣೆ ಮಾಡುವಂತೆಯೂ ಹೇಳಿದ್ದೇವೆ ಎಂದಿದೆ.

ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣದ ಬಗ್ಗೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದು, ಇದೊಂದು ಉದ್ದೇಶಪೂರ್ವ ಕೃತ್ಯ. ಅರಾಜಕತಾವಾದಿಗಳು ನಡೆಸಿದ ಹೇಡಿತನದ ದಾಳಿ ಎಂದಿದ್ದರು. ಇದಕ್ಕೆ ಸಿದ್ಧಾರ್ಥ್ ವಿಶ್ವದ ‘ಸೂಕ್ಷ್ಮ ಕಾಕ್ ಚಾಂಪಿಯನ್’, ಭಾರತವನ್ನು ರಕ್ಷಿಸೋಕೆ ನಿಮ್ಮಂತವರು ಇದ್ದೀರ, ದೇವರಿಗೆ ಧನ್ಯವಾದ ಎಂದು ವ್ಯಂಗ್ಯವಾಡಿ, ಶೇಮ್ ಆನ್ ಯು ಹ್ಯಾಷ್‌ಟ್ಯಾಗ್ ಬಳಸಿದ್ದರು.

ಇದೊಂದು ಸ್ಟ್ರೀ ದ್ವೇಷ ಹಾಗೂ ಅತಿರೇಕದ ಟ್ವೀಟ್ ಆಗಿದೆ, ಇದನ್ನು ತಕ್ಷಣ ಬ್ಲಾಕ್ ಮಾಡಬೇಕು ಎಂದು ಆಯೋಗ ಮನವಿ ಮಾಡಿದೆ.
ಯಾವಾಗ ಕಾನೂನು ತನ್ನ ಸುತ್ತ ಸುತ್ತಿಕೊಳ್ಳಲಿದೆ ಎಂದು ಅರಿವಾಯಿತೋ ಆಗ ಟ್ವಿಟ್ಟರಿನಲ್ಲಿ ವರಸೆ ಬದಲಿಸಿರುವ ನಟ ಸಿದ್ಧಾರ್ಥ, ‘ಕಾಕ್ ಆಂಡ್ ಬುಲ್’ ಅಂತ ಬಳಸುತ್ತಾರಲ್ಲ, ಆ ಅರ್ಥದಲ್ಲಿ ಪದಪ್ರಯೋಗ ಮಾಡಿದ್ದು ಹೊರತು ಮತ್ಯಾವುದೇ ಅಶ್ಲೀಲತೆ ಲೇಪವಿಲ್ಲ ಎಂದು ತಿಪ್ಪೆ ಸಾರಿಸುವ ಯತ್ನ ಮಾಡಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!