ಹೊಸದಿಗಂತ ಡಿಜಿಟಲ್ ಡೆಸ್ಕ್:
ರೆಬೆಲ್ ಸ್ಟಾರ್ ಪ್ರಭಾಸ್ ಗ್ಯಾಪ್ ಇಲ್ಲದೇ ಸತತ ಚಿತ್ರಗಳ ಶೂಟಿಂಗ್ ಮಾಡುತ್ತಿದ್ದಾರೆ. ಪ್ರಸ್ತುತ ಈ ಪ್ಯಾನ್ ಇಂಡಿಯಾ ಸ್ಟಾರ್ ಸಲಾರ್, ಕಲ್ಕಿ 2898 ಎಡಿ ಮತ್ತು ಮಾರುತಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೇ ವೇಳೆ ಪ್ರಭಾಸ್ ಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಈ ನಟನ ಪ್ರತಿಮೆ ನೋಡಿ ಆಶ್ಚರ್ಯಕ್ಕೊಳಗಾಗಿದ್ದರಂತೆ ಪ್ರಭಾಸ್! ಆ ಪ್ರತಿಮೆ ಯಾರದ್ದು ನೋಡೋಣ ಬನ್ನಿ..
ಪ್ರಭಾಸ್ ದೊಡ್ಡಪ್ಪ, ಟಾಲಿವುಡ್ ನ ಹಿರಿಯ ನಟ ‘ಕೃಷ್ಣಂರಾಜು’ ಕಳೆದ ವರ್ಷ ಇಹಲೋಕ ತ್ಯಜಿಸಿದ್ದು ಗೊತ್ತೇ ಇದೆ. ಅವರ ಸಾವಿನಿಂದ ಪ್ರಭಾಸ್ ಕುಟುಂಬ ತುಂಬಾ ದುಃಖಿತವಾಗಿತ್ತು. ಕೃಷ್ಣಂರಾಜ್ ಅವರ ಪತ್ನಿ ಶ್ಯಾಮಲಾ ದೇವಿ ಕೃಷ್ಣಂರಾಜನ ಪ್ರತಿಮೆಯನ್ನು ಮಾಡಿಸಿದ್ದಾರೆ.ಈ ವಿಚಾರ ಅದು ಪ್ರಭಾಸ್‌ಗೆ ಗೊತ್ತಿರಲಿಲ್ಲವಂತೆ, ಪ್ರತಿಮೆಯನ್ನು ಕಂಡ ಕೂಡಲೇ ಭಾವುಕರಾಗಿದ್ದಾರೆ.
ಐದು ನಿಮಿಷಗಳ ಕಾಲ ಆ ಪ್ರತಿಮೆಯನ್ನೇ ದಿಟ್ಟಿಸಿ ನೋಡಿದರೆಂದು ಈ ವಿಷಯವನ್ನು ಸ್ವತಃ ಪ್ರಭಾಸ್ ಅಜ್ಜಿ ಶ್ಯಾಮಲಾ ದೇವಿ ತಿಳಿಸಿದ್ದಾರೆ. ಈ ಸಂಬಂಧ ವಿಡಿಯೋ ಇದೀಗ ವೈರಲ್ ಆಗಿದೆ. ಅದೇ ವಿಡಿಯೋದಲ್ಲಿ ಕೃಷ್ಣಂರಾಜು ವಿಗ್ರಹವನ್ನೂ ತೋರಿಸಲಾಗಿದೆ.
#Prabhas surprised and shocked after seeing this @UVKrishnamRaju garu statue, he was stunned for a while and asked who made it.. 👌❤️ pic.twitter.com/j9ZXQcViRp
— Prabhas Trends (@TrendsPrabhas) October 9, 2023