Sunday, December 10, 2023

Latest Posts

ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಠಾಣೆ ಅಧಿಕಾರಿಗಳು

ಹೊಸದಿಗಂತ ವರದಿ ಬಳ್ಳಾರಿ:

ಅಪ್ರಾಪ್ತ ವಯಸ್ಕರು, ಪರವಾನಿಗೆ ಇಲ್ಲದೇ ವಾಹನ ಚಲಾಯಿಸುವರಿಗೆ ಸಂಚಾರಿ ಠಾಣೆ ಪೊಲೀಸರು ಮಂಗಳವಾರ ಬಿಸಿ ಮುಟ್ಟಿಸಿದರು. ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರ ಸೂಚನೆಯಂತೆ, ಇಲ್ಲಿನ ಸಂಚಾರಿ ಠಾಣೆ ಪಿಐ ನಾಗಭೂಷಣ್ ಅವರ ನೇತೃತ್ವದಲ್ಲಿ ನಗರದ ಮುನ್ಸಿಪಲ್ ಕಾಲೇಜು ಸೇರಿದಂತೆ ನಾನಾ ಕಡೆ ಅಪ್ತಾಪ್ತ ವಯಸ್ಕರು ಹಾಗೂ ಪರವಾನಿಗೆ ಪಡೆಯದೇ ವಾಹನ ಚಲಾಯಿಸುವರನ್ನು ತಪಾಸಣೆ ನಡೆಸಿ ಬಿಸಿ ಮುಟ್ಟಿಸಿದರು.

ಕೆಲವರಿಗೆ ದಂಡವಿಧಿಸಿ, ಪರವಾನಿಗೆ ಪಡೆಯದಿರುವರು ಕೂಡಲೇ ಪರವಾನಿಗೆ ಪಡೆದುಕೊಳ್ಳಬೇಕು, ಅಪ್ರಾಪ್ತ ವಯಸ್ಕರಿಗೆ ಪೋಷಕರು ಯಾವುದೇ ಕಾರಣಕ್ಕೂ ವಾಹನ ಚಲಾಯಿಸಲು ಅವಕಾಶ ಕಲ್ಪಿಸಬೇಡಿ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಚಾರಿ ಠಾಣೆ ಪಿಐ ನಾಗಭೂಷಣ್ ಅವರು ಮಾತನಾಡಿ, ಇತ್ತೀಚೆಗೆ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು ಕಂಡು‌ ಬರುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಿ, ಪರವಾನಿಗೆ ಪಡೆದು ಸಂಚರಿಸುವಂತೆ ತಾಕೀತು ಮಾಡಲಾಯಿತು.

ಬೆಳಿಗ್ಗೆ ಯಿಂದ ಸುಮಾರು ವಾಹನಗಳನ್ನು ಹಿಡಿದು ತಪಾಸಣೆ ಮಾಡಲಾಗಿದ್ದು, ಸುಮಾರು ವಾಹನ ಮಾಲೀಕರಿಗೆ ದಂಡ ವಿಧಿಸಲಾಗಿದೆ. ವಿಶೇಷವಾಗಿ ಅಪ್ರಾಪ್ತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ವಾಹನ ಹಿಡಿದ ಬಳಿಕ ಬರುವ ಪೋಷಕರಿಗೂ ಮನವರಿಕೆ ಮಾಡಿಕೊಡಲಾಗುತ್ತಿದೆ. ಚಾಲನಾ ಪರವಾನಿಗೆ ಇಲ್ಲದವರು, ಅಪ್ರಾಪ್ತ ವಯಸ್ಕ ಮಕ್ಕಳು ವಾಹನ ಬಳಸುವುದು ಅಪರಾಧ, ಉಲ್ಲಂಘಿಸಿದರೆ ಕಲಂ 5(1) ಆಧಾರ 180 ಐ.ಎಂ.ವಿ. ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!