ಹೊಸ ದಿಗಂತ ವರದಿ,ಮಂಡ್ಯ :
ಸಾಲಬಾಧೆಯಿಂದ ಬೇಸತ್ತ ರೈತ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಬಿಳಿದೇಗಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಿ.ಸಿ.ಸ್ವಾಮಿ (48) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ರೈತ. ಟ್ರಾಕ್ಟರ್ ಸಾಲ, ಬೆಳೆ ಸಾಲ, ಕೈ ಸಾಲ ಸೇರಿದಂತೆ ಹತ್ತು ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ರೈತ ಬಿ.ಸಿ. ಸ್ವಾಮಿ ಸಾಲ ಭಾದೆಯಿಂದ ಬೇಸತ್ತಿದ್ದ.
ಇತ್ತೀಚೆಗೆ ಆತನಿಗೆ ಸೇರಿದ ಆಲೆಮನೆ ಬೆಂಕಿಗಾಹುತಿಯಾಗಿ ನಷ್ಟ ಅನುಭವಿಸಿದ್ದ. ಗ್ರಾಮದಲ್ಲಿ ಎರಡು ಎಕರೆ ಜಮೀನು ಹೊಂದಿದ್ದ ಸ್ವಾಮಿ, ಎರಡು ಹಂಗಾಮಿನಲ್ಲೂ ಯಾವುದೇ ಬೆಳೆ ಇಲ್ಲದೆ ನಷ್ಟಕ್ಕೊಳಗಾಗಿದ್ದ.
ಸಾಲ ತೀರಿಸಲಾಗದೆ ಸಂಕಷ್ಟ ಅನುಭವಿಸಿದ್ದ ಸ್ವಾಮಿ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.