April 4, 2026
Saturday, April 4, 2026
spot_img

ಏಪ್ರಿಲ್ 1ರಿಂದ ದೇಶಾದ್ಯಂತ E20 ಪೆಟ್ರೋಲ್ ಮಾರಾಟ ಕಡ್ಡಾಯ: ಕೇಂದ್ರ ಸರ್ಕಾರದ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಪ್ರಿಲ್ 1ರಿಂದ ದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ಮಾರಾಟ ಕಡ್ಡಾಯ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಫೆಬ್ರವರಿ 17ರಂದು ಪ್ರಕಟಿಸಿದ ಆದೇಶದಂತೆ, RON 95 ಮಾನದಂಡ ಹೊಂದಿರುವ ಇಂಧನವೇ ಮಾರಾಟವಾಗಬೇಕು.

ಎಥೆನಾಲ್ ಹೆಚ್ಚಿನ ಆಕ್ಟೇನ್ ಗುಣಮಟ್ಟ ಹೊಂದಿದ್ದು, ಶುದ್ಧವಾಗಿ ಉರಿಯುವ ಮೂಲಕ ಕಾರ್ಬನ್ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಹೊರಸೂಸುವಿಕೆಯನ್ನು 30-44%ರವರೆಗೆ ಕಡಿಮೆ ಮಾಡಲು ನೆರವಾಗುತ್ತದೆ. 20% ಎಥೆನಾಲ್ ಮತ್ತು 80% ಪೆಟ್ರೋಲ್ ಮಿಶ್ರಣವನ್ನೇ E20 ಎಂದು ಕರೆಯಲಾಗುತ್ತದೆ. ಕಬ್ಬು, ಜೋಳ ಮುಂತಾದ ಬೆಳೆಗಳಿಂದ ಉತ್ಪಾದಿಸುವ ಜೈವಿಕ ಇಂಧನವೇ ಎಥೆನಾಲ್.

ಇದನ್ನೂ ಓದಿ:

ಭಾರತದಲ್ಲಿ ಇ5 (2003) ಹಾಗೂ ಇ10 (2022) ಹಂತಗಳನ್ನು ದಾಟಿ, ಈಗ ರಾಷ್ಟ್ರವ್ಯಾಪಿ E20 ಜಾರಿಗೆ ಬಂದಿದೆ. 2009 ನಂತರದ ಅನೇಕ ವಾಹನಗಳು E20ಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಂಡಿವೆ.

ಈ ಕ್ರಮದಿಂದ ವಾಯುಮಾಲಿನ್ಯ ಇಳಿಕೆಯಾಗುವ ಜೊತೆಗೆ, ಇಂಧನ ಆಮದು ಖರ್ಚು ಕಡಿಮೆಯಾಗಲಿದೆ. ಎಥೆನಾಲ್ ಮಿಶ್ರಣದ ಮೂಲಕ ತೈಲ ಕಂಪನಿಗಳು ಲಕ್ಷಾಂತರ ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯ ಮಾಡಿವೆ ಎಂದು ಸರ್ಕಾರ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !