August 31, 2026
Monday, August 31, 2026
spot_img

ಕೆಲಸ ಮಾಡಿಸಿಕೊಂಡು ಸಂಬಳ ಕೊಡದೆ ಬಂಧನದಲ್ಲಿಟ್ಟಿದ್ದ ಕಾರ್ಮಿಕರ ರಕ್ಷಣೆ: ಆರೋಪಿ ಪರಾರಿ

ಹೊಸದಿಗಂತ ವರದಿ ಹಾಸನ:

ಬೇಲೂರು ತಾಲ್ಲೂಕಿನ, ಹಳೇಬೀಡು ಹೋಬಳಿ ಚಟ್ನಹಳ್ಳಿ ಗ್ರಾಮದಲ್ಲಿ ದಿನಗೂಲಿ ನೀಡದೆ ಕೆಲಸ‌ ಮಾಡಿಸಿಕೊಂಡು ಬಂಧಿಸಿಟ್ಟಿದ್ದ ಹದಿನೆಂಟಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ದಾಳಿ ನಡೆಸಿ ರಕ್ಷಣೆ ಮಾಡಿದ್ದಾರೆ.

ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬಂದಿದ್ದ ನಿರ್ಗತಿಕರನ್ನು‌ ಕೆಲಸ ಕೊಡುವುದಾಗಿ ಕರೆದುಕೊಂಡು ಬರುತ್ತಿದ್ದ ನಾಗರಾಜ್ ಎಂಬಾತ ಎಲ್ಲರನ್ನೂ ಒಂದೆಡೆ ಕೂಡಿ ಹಾಕಿ ಶುಂಠಿ ಕೆಲಸಕ್ಕೆ ಕರೆದೊಯ್ದು, ಕೆಲಸ ಮುಗಿದ ನಂತರ ಅದೇ ಜಾಗದಲ್ಲಿ ಕೂಡಿ ಹಾಕುತ್ತಿದ್ದ. ಖಚಿತ ಮಾಹಿತಿ ಆಧಾರಿಸಿ ದಾಳಿ ನಡೆಸಿರುವ ಪೋಲೀಸರು ಹದಿನೆಂಟಕ್ಕೂ ಹೆಚ್ಚು ಬಂಧಿತ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:

ಅಮಾಯಕ ಕಾರ್ಮಿಕರನ್ನು ರಕ್ಷಿಸಿರುವ ಪೊಲೀಸರು ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಆಶ್ರಯ ನೀಡಿದ್ದಾರೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆರೋಪಿ ನಾಗರಾಜ್ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಘಟನೆ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !