ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌದಿ ಅರೇಬಿಯಾದಲ್ಲಿ ಪುಣೆ ಮೂಲದ ಮಹಿಳೆಯರನ್ನು ಮಾರಾಟ ಮಾಡಲಾಗಿದ್ದು, ಕರ್ನಾಟಕ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬೆಂಗಳೂರು ಮೂಲದ ಎಂ ಫೈಯಾಜ್ ಎಂಬಾತತನನ್ನು ಬಂಧಿಸಿದ್ದು, ಮಹಿಳೆಯರನ್ನು ತಲಾ ನಾಲ್ಕು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.
ಇದೀಗ ನ್ಯಾಯಲಯ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದೆ. ಈತ ಕೆಲ ಸಹಚರರನ್ನು ಹೊಂದಿದ್ದು, ಬಡ ಹೆಣ್ಣುಮಕ್ಕಳಿಗೆ ದೊಡ್ಡ ವೇತನ ಸಿಗುವ ಕೆಲಸ ಕೊಡಿಸುತ್ತೇನೆ ಎಂದು ಹೇಳುತ್ತಿದ್ದ. ಸೌದಿ ಅರೇಬಿಯಾದ ದೊಡ್ಡ ಕುಟುಂಬಗಳ ಬಳಿ ಕೆಲಸ ಮಾಡಿದರೆ ತಿಂಗಳಿಗೆ 35 ಸಾವಿರ ಸಂಬಳ ನೀಡುತ್ತಾರೆ ಎಂದು ಆಮಿಷವೊಡ್ಡಿ ಮಾನವ ಕಳ್ಳಸಾಗಣೆ ಮಾಡಿದ್ದಾರೆ ಎನ್ನಲಾಗಿದೆ.