Saturday, December 2, 2023

Latest Posts

CINE | ಒಂಬತ್ತು ವರ್ಷದಿಂದ ನಡೆಯುತ್ತಿದ್ದ ಕೋಲ್ಡ್‌ವಾರ್ ನಿಲ್ಲಿಸಿದ ಸಲ್ಮಾನ್-ಅರಿಜಿತ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಫೇಮಸ್ ಸಿಂಗರ್ ಅರಿಜಿತ್ ಸಿಂಗ್ ನಡುವೆ ಇದ್ದ ಮನಸ್ತಾಪ ಇದೀಗ ಶಮನವಾದಂತೆ ಕಾಣುತ್ತಿದೆ ಒಂಬತ್ತು ವರ್ಷಗಳ ಹಿಂದೆ ನಡೆದ ಸಣ್ಣ ಮನಸ್ತಾಪದ ಕಾರಣದಿಂದ ಅರಿಜಿತ್ ಹಾಗೂ ಸಲ್ಮಾನ್ ನಡುವೆ ಕೋಲ್ಡ್‌ವಾರ್ ನಡೆದಿದ್ದು, ಇದೀಗ ಎಲ್ಲವೂ ಶಮನವಾಗೋ ಲಕ್ಷಣ ಕಾಣಿಸುತ್ತಿದೆ.

ಒಂಬತ್ತು ವರ್ಷದ ಹಿಂದೆ ನಡೆದಿದ್ದೇನು?
ಅರಿಜಿತ್ ಸಿಂಗ್ ಯಾವುದೇ ಅವಾರ್ಡ್ ಫಂಕ್ಷನ್‌ಗೆ ಬಂದರೂ ಸಿಕ್ಕಾಪಟ್ಟೆ ಸಿಂಪಲ್ ಆಗಿ ಬರುತ್ತಾರೆ. ತಮ್ಮದೇ ಶೈಲಿಯ ಸಿಂಪಲ್ ಉಡುಗೆ ಧರಿಸಿ ಅವಾರ್ಡ್ ಫಂಕ್ಷನ್‌ಗೆ ಅರಿಜಿತ್ ಬಂದಿದ್ದರು. ಸಲ್ಮಾನ್ ಅಂದು ಬೆಸ್ಟ್ ಸಿಂಗರ್ ಅವಾರ್ಡ್ ನೀಡುವಾಗ ನೀವೇನಾ ವಿನ್ನರ್ ಎಂದು ಪ್ರಶ್ನಿಸಿದ್ದರು, ಬಟ್ಟೆ ನೋಡಿ ನನ್ನನ್ನು ಅಳೆಯುತ್ತಿರಬಹುದು ಎನ್ನುವ ಲೆಕ್ಕಾಚಾರದಲ್ಲಿ ಅರಿಜಿತ್ ಕೂಡ ಕೊಂಕು ಉತ್ತರ ನೀಡಿ ಸ್ಟೇಜ್‌ನಿಂದ ಇಳಿದಿದ್ದರು. ಲಕ್ಷಾಂತರ ಜನರ ಮುಂದೆ ಸಲ್ಮಾನ್‌ಗೆ ಮುಜುಗರವಾಗಿತ್ತು. ಇದಾದ ನಂತರ ಸುಲ್ತಾನ್, ಕಿಕ್ ಹಾಗೂ ಭಜರಂಗಿ ಬಾಯಿಜಾನ್‌ನಲ್ಲಿ ಅರಿಜಿತ್ ಹಾಡಿದ್ದ ಹಾಡುಗಳನ್ನು ಯುಟ್ಯೂಬ್‌ನಿಂದ ತೆಗೆದು ಹಾಕಲಾಗಿತ್ತು.

Arijit Singh | Salman Khan | Mithoon | Angry Moments | Award - YouTubeಅಂದಿನ ತಮ್ಮ ನಡೆ ಬಗ್ಗೆ ಅರಿಜಿತ್ ಸಾಕಷ್ಟು ಬಾರಿ ಕ್ಷಮೆ ಕೇಳಿದ್ದಾರೆ. ಸಲ್ಮಾನ್‌ಗೆ ಕರೆ ಮಾಡಿ ಸಂದೇಶ ಕಳುಹಿಸಿ ಇಮೇಲ್ ಮೂಲಕವೂ ಕ್ಷಮೆಯಾಚಿಸಿ ಹಾಡುಗಳನ್ನು ವಾಪಾಸ್ ಹಾಕುವಂತೆ ಹೇಳಿದ್ದರು ಎನ್ನಲಾಗಿದೆ. ಇದೀಗ ಒಂಬತ್ತು ವರ್ಷದ ನಂತರ ಇಬ್ಬರೂ ಒಂದಾಗುತ್ತಿದ್ದು, ಟೈಗರ್-3ನಲ್ಲಿ ಅರಿಜಿತ್ ಹಾಡ್ತಿದ್ದಾರಾ? ಕಾದುನೋಡಬೇಕಿದೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!