ಪ್ರತಿದನವೂ ಹೊರಗೆ ಹೋಗಿ ದುಡಿಯುವ ಮಹಿಳೆಯರಿಗೆ ಮೇಕಪ್ ಅಭೈಆಸ ಇದದೇ ಇರುತ್ತದೆ. ಹೆವಿ ಮೇಕಪ್ ಅಲ್ಲವಾದ್ರೂ ಮಾಮೂಲಿ ಬೇಸಿಕ್ಸ್ ಮಾಡಿರಲೇಬೇಕು, ಇನ್ನು ಸನ್‌ಸ್ಕ್ರೀನ್ ಹಚ್ಚಿದರೂ ಅದನ್ನು ರಾತ್ರಿ ಮಲಗುವ ಮುನ್ನ ತೆಗೆಯಲೇ ಬೇಕು. ಸುಸ್ತಾಗಿದೆ ಎಂದೋ ರೊಟೀನ್‌ನಿಂದ ಬೇಜಾರಾಗಿದೆ ಎಂದೋ ಮೇಕಪ್ ತೆಗೆಯೋದನ್ನು ನಿಲ್ಲಿಸಿದ್ರೆ ಏನೆಲ್ಲಾ ತೊಂದರೆ?
ನಿಮ್ಮ ಮುಖ ವಯಸ್ಸಿಗಿಂತ ಏಜ್ ಆದಂತೆ ಕಾಣಿಸೋಕೆ ಇದು ಕಾರಣವೇ, ಕೆಲವರಿಗೆ ಮುಖದಲ್ಲಿ ವಯಸ್ಸೇ ಕಾಣೋದಿಲ್ಲ, ಏಕಂದ್ರೆ ಅವರು ಮುಖದ ಕಾಳಜಿ ಮಾಡ್ತಾರೆ. ಇನ್ನು ಬೆಳಗ್ಗೆಯಿಡೀ ಅನುಭವಿಸಿದ ಸ್ಟ್ರೆಸ್, ಧೂಳು, ಬಿಸಿಲು ಎಲ್ಲದರಿಂದ ಚರ್ಮಕ್ಕೆ ಬ್ರೇಕ್ ಬೇಕಿರುತ್ತದೆ.
ರಾತ್ರಿ ಮೇಕಪ್ ತೆಗೆದು, ಮುಖ ತೊಳೆದು ಸ್ಕಿನ್ ಕೇರ್ ಮಾಡದೇ ಹೋದರೆ ಮುಖದಲ್ಲಿರುವ ಸೆಲ್‌ಗಳಿಗೆ ಉಸಿರಾಡಲು ಜಾಗವೇ ಇರೋದಿಲ್ಲ. ಮೇಕಪ್‌ನಿಂದ ಸ್ಕಿನ್ ರಿಪೇರಿ ಆಗೋದಿಲ್ಲ. ರಿಂಕಲ್ಸ್, ಡಾರ್ಕ್ ಸರ್ಕಲ್ಸ್ ಎಲ್ಲವೂ ಇದರಿಂದಲೇ ಬರುತ್ತದೆ. ಇಷ್ಟೇ ಅಲ್ಲದೆ ನಿಮ್ಮ ಚರ್ಮದ ಹೊಳಪು ಕಡಿಮೆಯಾಗುವಂತೆ ಮಾಡುತ್ತದೆ.