ತನ್ನ ಮದುವೆಯನ್ನು ಉಳಿಸಿದ್ದು ಸಲ್ಮಾನ್ ಖಾನ್: ರಾಖಿ ಸಾವಂತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉದ್ಯಮಿ ಆದಿಲ್ ಖಾನ್ ದುರಾನಿ , ನಟಿ ರಾಕೀ ಸಾವಂತ್ ಮದುವೆ ವಿಚಾರ ಒಂದಲ್ಲ ಒಂದುರೀತಿ ಸುದ್ದಿಯಲ್ಲಿದ್ದು, ಒಮ್ಮೆ ಮದುವೆನೇ ಆಗಿಲ್ಲ ಎಂದ ಆದಿಲ್ ಕೊನೆಗೂ ಒಪ್ಪಿಕೊಂಡರು.

ಆದ್ರೆ ರಾಖಿ ಸಾವಂತ್ ಮದುವೆ ಡ್ರಾಮಾ ಇನ್ನೂ ಮುಗಿದ ಹಾಗೆ ಕಾಣುತ್ತಿಲ್ಲ. ಮದುವೆ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ರಾಖಿ ಫತೀಮಾ ಆಗಿ ಬದಲಾಗಿದ್ದಾರೆ. ಇದಾದ ಬಳಿಕ ಇದೀಗ ಮುಂಬೈನಲ್ಲಿ ಪಾಪಾರಾಜಿಗಳ ಮುಂದೆ ಪತಿ ಆದಿಲ್ ಜೊತೆ ಹಾಜರಾದ ರಾಕಿ ಸಾವಂತ್ ತಮ್ಮ ಮದುವೆ ಉಳಿಸಿದ್ದು ಸಲ್ಮಾನ್ ಖಾನ್ ಎಂದು ಹೇಳಿದ್ದಾರೆ. ಆದಿಲ್ ತನ್ನನ್ನು ಸ್ವಾಕರಿಸಲು ನಿರಾಕರಿಸಿದಾಗ ಸಲ್ಮಾನ್ ಖಾನ್ ಕರೆ ಮಾಡಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಅವರನ್ನು ಸಹೋದರ ಎಂದ ರಾಖಿ ಸಾವಂತ್ ತನ್ನ ಮದುವೆಯನ್ನು ಉಳಿಸಿದರು ಎಂದು ಹೇಳಿದ್ದಾರೆ. ‘ನನ್ನ ಸಹೋದರ (ಸಲ್ಮಾನ್) ಅವರನ್ನು ತುಂಬಾ ಪ್ರೀತಿಸುತ್ತೇನೆ. ಖಂಡಿತವಾಗಿಯೂ ಅವನಿಗೆ ನನ್ನ ಸಹೋದರನಿಂದ ಕರೆ ಬಂದಿದೆ. ಇದನ್ನು ಸರಿ ಮಾಡಿದ್ದು ಅವರೆ ನಿಮಗೆ ಗೊತ್ತ’ ಎಂದು ಹೇಳಿದರು. ‘ಅವನು ಸಲ್ಮಾನ್ ಸಹೋದರಿಯ ಮದುವೆಯನ್ನು ನಿರಾಕರಿಸಬಹುದು ಎಂದು ನೀವು ಭಾವಿಸುತ್ತೀರಾ?, ಸಹೋದರನ ಫೋನ್ ಕರೆಯ ಬಳಿಕ ಒಪ್ಪಿಕೊಂಡಿದ್ದಾನೆ’ ಎಂದು ರಾಖಿ ಹೇಳಿದ್ದಾರೆ.

ಆದಿಲ್ ಕೂಡ ಮಾತನಾಡಿದ್ದು, ಸಲ್ಮಾನ್ ಅವರು ತುಂಬಾ ಒಳ್ಳೆಯವರು, ವಿನಮ್ರ ವ್ಯಕ್ತಿ. ಅವರು ನನಗೆ ಕೆಲವು ವಿಷಯಗಳನ್ನು ಹೇಳಿದರು. ನಾನು ಕೂಡ ಓಕೆ ಎಂದು ಹೇಳಿದೆ’ ಎಂದು ಆದಿಲ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!