ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಕಿಸಿ ಕ ಭಾಯ್, ಕಿಸಿ ಕಿ ಜಾನ್ ಸಿನಿಮಾ ತೆರೆಕಾಣಲಿದೆ.
ಸಿನಿಮಾಗಾಗಿ ಸಲ್ಮಾನ್-ಪೂಜಾ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಪ್ರಚಾರದ ವೇಳೆ ಟ್ರೇಲರ್‌ನಲ್ಲಿ ಕಾಣುವ ಸಲ್ಮಾನ್ ಬಾಡಿ ವಿಎಫ್‌ಎಕ್ಸ್ ಎನ್ನುವ ಕಮೆಂಟ್ ಎದುರಾಗಿದ್ದು, ಇದನ್ನು ತಮಾಷೆಯಾಗಿಯೇ ತೆಗೆದುಕೊಂಡ ಸಲ್ಮಾನ್ ಖಾನ್ ವೇದಿಕೆ ಮೇಲೆಯೇ ಶರ್ಟ್ ಬಿಚ್ಚಿ ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ.
೫೭ರ ಹರೆಯದಲ್ಲೂ ಸಲ್ಮಾನ್ ಫಿಟ್‌ನೆಸ್‌ಗೆ ಸಾಕಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಯಾವ ಸಿನಿಮಾದಲ್ಲಿಯೂ ಎಫೆಕ್ಟ್ಸ್ ಇಲ್ಲ,ಸಿಕ್ಸ್ ಪ್ಯಾಕ್‌ಗಾಗಿ ಶ್ರಮ ವಹಿಸಿದ್ದೇನೆ ಎಂದು ಸಲ್ಮಾನ್ ಹೇಳಿದ್ದಾರೆ.