Sunday, February 5, 2023

Latest Posts

CINE NEWS | ಸಲ್ಮಾನ್ ಖಾನ್ ಹುಟ್ಟುಹಬ್ಬ, ಕೊರೋನಾ ನಡುವೆ ಪಾರ್ಟಿ ಮಾಡಿದ ಸೆಲೆಬ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹುಟ್ಟುಹಬ್ಬ, ಈ ಸೆಲೆಬ್ರೇಷನ್ ಜೋರಾಗಿದ್ದು, ಬಾಲಿವುಡ್ ಸೆಲೆಬ್ಸ್ ಕೂಡ ಸಾಥ್ ನೀಡಿದ್ದಾರೆ.

ಎಲ್ಲಾ ಸೆಲೆಬ್ರಿಟಿಗಳಿಗಾಗಿ ಭರ್ಜರಿ ಪಾರ್ಟಿಯೊಂದನ್ನು ಸಲ್ಮಾನ್ ಆಯೋಜಿಸಿದ್ದರು. ಮುಂಬೈ ನಿವಾಸದಲ್ಲಿ ನಡೆದ ಈ ಪಾರ್ಟಿಯಲ್ಲಿ ಶಾರುಖ್, ಪೂಜಾ ಇನ್ನಿತರ ಸೆಲೆಬ್ಸ್ ಭಾಗಿಯಾಗಿದ್ದಾರೆ.

ದೇಶಕ್ಕೆ ಮತ್ತೆ ಕೊರೋನಾ ಎಂಟ್ರಿ ಕೊಟ್ಟಿದೆ. ಹೀಗಿರುವಾಗ ಪಾರ್ಟಿ ಮಾಡಿದ್ದು ಯಾಕೆ ಎಂದು ನೆಟ್ಟಿಗರು ಪ್ರಶ್ನೆಯಿಟ್ಟಿದ್ದಾರೆ. ಇದೀಗ ಎಲ್ಲೆಡೆ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಇಲ್ಲಿಗೆ ಬಂದ ಯಾವ ಸೆಲೆಬ್ಸ್ ಕೂಡ ಮಾಸ್ಕ್ ಧರಿಸಿಲ್ಲ. ಕೊರೋನಾ ವೇಗವಾಗಿ ಹಬ್ಬುತ್ತಿದೆ. ಹೀಗಿರುವಾಗ ಈ ರೀತಿ ಕೊರೋನಾಗೆ ಆಹ್ವಾನ ನೀಡುವ ಪಾರ್ಟಿ ಮಾಡೋದು ಸರಿಯಲ್ಲ ಎಂದು ಜನ ಹೇಳಿದ್ದಾರೆ.

ಈ ಹಿಂದೆ ಕರಣ್ ಜೋಹರ್ ಪಾರ್ಟಿಯೊಂದನ್ನು ಆರ್ಗನೈಸ್ ಮಾಡಿದ್ದರು. ಅದರಲ್ಲಿ ಭಾಗಿಯಾಗಿದ್ದವರಿಗೂ ಕೊರೋನಾ ಕಾಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!