Thursday, February 2, 2023

Latest Posts

ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಸಲ್ಮಾನ್ ಖುರ್ಷಿದ್!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ಭಾ ರತ್ ಜೋಡೋ ಯಾತ್ರೆಯನ್ನು ರಾಮಾಯಣ ಮಹಾಕಾವ್ಯಕ್ಕೆ ಹಾಗೂ ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ್ದಾರೆ .

ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಭರತ್ ಗೆ ಹೋಲಿಸಿದ ಸಲ್ಮಾನ್ ಖುರ್ಷಿದ್, ರಾಹುಲ್ ಗಾಂಧಿ ಅತಿಮಾನುಷ ವ್ಯಕ್ತಿ. ನಾವು ಚಳಿಯಲ್ಲಿ ಹೆಪ್ಪುಗಟ್ಟುತ್ತಿದ್ದೇವೆ ಮತ್ತು ಚಳಿಯಿಂದ ರಕ್ಷಣೆ ಪಡೆಯಲು ಜಾಕೆಟ್ಗಳನ್ನು ಧರಿಸುತ್ತಿರುವಾಗ ಅವರು ಮಾತ್ರ ಕೇವಲ ಟೀ ಶರ್ಟ್ನಲ್ಲಿ (ಭಾರತ್ ಜೋಡೋಗಾಗಿ ಹೊರಡುತ್ತಿದ್ದಾರೆ. ಯಾತ್ರಾ)ಯೋಗಿಯಂತೆ ನಡೆಯುತ್ತಿದ್ದಾರೆ.

ರಾಮನು ತೆರಳಲು ಸಾಧ್ಯವಾಗದಿರುವ ಪ್ರದೇಶಗಳಿಗೆ ಸಹೋದರ ಭರತ ಪಾದುಕೆಗಳನ್ನು ತೆಗೆದುಕೊಂಡು ಹೋಗಿ ಸಂಚಾರ ಮಾಡಿದಂತೆ ಕಾಂಗ್ರೆಸ್ ಪಕ್ಷ ಕೂಡ ಯಾತ್ರೆ ತೆರಳದಿರುವ ಪ್ರದೇಶಗಳಿಗೆ ಹೋಗಿ ಪ್ರಚಾರ ಮಾಡಲಾಗುವುದು. ಸದ್ಯ ರಾಹುಲ್ ಗಾಂಧಿ ಅವರು ತಪಸ್ಸಿನ ಕಡೆಗೆ ಗಮನಹರಿಸಿರುವ ಸಂತ ಎಂದು ಹೊಗಳಿದರು. ಈಗ ‘ಪಾದುಕೆ’ ಉತ್ತರ ಪ್ರದೇಶವನ್ನು ತಲುಪಿದೆ. ರಾಮ್ ಜಿ(ರಾಹುಲ್ ಗಾಂಧಿ) ಕೂಡ ಬರುತ್ತಾರೆ, ಇದು ನಮ್ಮ ನಂಬಿಕೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!