ಬಾರ್, ಪಬ್‌ಗಳಲ್ಲಿ ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಿ: ಮಾರುಕಟ್ಟೆಗೆ ಬಂದಿದೆ ಸ್ಪೆಷಲ್ ಮಾಸ್ಕ್ ಎಂದ ಸಚಿವ ಅಶೋಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಮಾಸ್ಕ್ ಕಡ್ಡಾಯಕ್ಕೆ ಪಬ್, ಬಾರ್ ಮಾಲೀಕರ ವಿರೋಧದ ವ್ಯಕ್ತ ಬೆನ್ನಲ್ಲೇ ಸಚಿವ ಅಶೋಕ್ ಬಾರ್ ಹಾಗೂ ಪಬ್‌ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಮಾರುಕಟ್ಟೆಯಲ್ಲಿ ಈಗಾಗಲೇ ವಿಶೇಷ ಮಾಸ್ಕ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಮಾಲೀಕರು ಅಥವಾ ನಿರ್ವಾಹಕರು ಆ ಮಾಸ್ಕ್‌ಗಳನ್ನು ಪಡೆದು ಬರುವ ಗ್ರಾಹಕರಿಗೆ ನೀಡಬೇಕು. ಇದರಿಂದ ಅವರು ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು ಎಂದು ತಿಳಿಸಿದ್ದಾರೆ.

ಡ್ರಿಂಕ್ಸ್ ಮಾಡಲು ಸ್ಪೆಷಲ್ ಮಾಸ್ಕ್ ರಿಲೀಸ್ ಮಾಡಿದ್ದಾರೆ. ಬರುವ ಗ್ರಾಹಕರಿಗೆ ಆ ಮಾಸ್ಕ್ಗಳನ್ನು ನೀಡಬೇಕು. ಇದರಿಂದ ಯಾರಿಗೂ ತೊಂದರೆಯಾಗೋದಿಲ್ಲ. ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಜನರ ಪ್ರಾಣ ಮುಖ್ಯ. ಜನರ ಪ್ರಾಣಕ್ಕೇ ಕಂಟಕ ಬಂದ್ರೆ ಏನು ಸಿಗುತ್ತದೆ? ನಿಮಗ್ಯಾರಿಗೋ ಬಾರ್ ವ್ಯಾಪಾರ ಆಗಬೇಕು ಅಂತಾ ಜನರ ಪ್ರಾಣ ತೆಗೆಯೋದು ಒಳ್ಳೆಯದಲ್ಲ. ನಾನು ಅವರಲ್ಲಿ ವಿನಂತಿ ಮಾಡ್ತೀನಿ, ದಯಮಾಡಿ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!