ಭದ್ರತೆಯೊಂದಿಗೆ ಮುಂಬೈನ ದ್ವೀಪದಲ್ಲಿ ಸಲ್ಮಾನ್​ ಶಾರುಖ್​ ‘ಟೈಗರ್ 3’ ಸಿನಿಮಾ ಶೂಟಿಂಗ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ಮಧ್ ದ್ವೀಪದಲ್ಲಿ ಹೆಚ್ಚಿನ ಭದ್ರತೆಯೊಂದಿಗೆ ಸಲ್ಮಾನ್ ಖಾನ್ ಅವರ ‘ಟೈಗರ್ 3’ ಚಿತ್ರದಲ್ಲಿ ಶಾರುಖ್ ಖಾನ್ ತಮ್ಮ ಅತಿಥಿ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಶಾರುಖ್ ಖಾನ್ ಕಳೆದ ಹಲವು ದಿನಗಳಿಂದ ಈ ಚಿತ್ರಕ್ಕಾಗಿ ಡೇಟ್​ ಫೈನಲ್​ ಮಾಡುವ ಯೋಚನೆಯಲ್ಲಿದ್ದರು. ಈಗಾಗಲೇ ಶೂಟಿಂಗ್​ ಆರಂಭಗೊಂಡಿದ್ದು, ಸುಮಾರು ಒಂದು ವಾರದ ಶೆಡ್ಯೂಲ್​ ಫಿಕ್ಸ್​ ಆಗಿದೆ.

ಚಲನಚಿತ್ರ ನಿರ್ಮಾಪಕರು ಮಧ್ ಐಸ್‌ಲ್ಯಾಂಡ್‌ನಲ್ಲಿ ಭಾರಿ ಭದ್ರತೆಯೊಂದಿಗೆ ಚಿತ್ರೀಕರಣ ನಡೆಸುತ್ತಿದ್ದಾರೆ. 35 ಕೋಟಿ ರೂ. ವೆಚ್ಚದ ಸೆಟ್​​ನಲ್ಲಿ ಆಯಕ್ಷನ್ ದೃಶ್ಯ ಚಿತ್ರೀಕರಿಸಲಾಗುತ್ತಿದೆ. ಏಳು ದಿನಗಳಲ್ಲಿ ಈ ದೃಶ್ಯ ಪೂರ್ಣಗೊಳ್ಳಲಿದೆ. ಈ ದೃಶ್ಯವನ್ನು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಜೊತೆಯಾಗಿ ಚಿತ್ರೀಕರಿಸಬೇಕಿದೆ.

ಆದಿತ್ಯ ಚೋಪ್ರಾ ನಿರ್ಮಾಣದಲ್ಲಿ ‘ಟೈಗರ್-3’ ನಿರ್ಮಾಣಗೊಳ್ಳುತ್ತಿದೆ. ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಯಶ್​ ರಾಜ್​ ಫಿಲ್ಮ್ಸ್ ಅಡಿ ರೆಡಿಯಾಗುತ್ತಿರುವ ಈ ಚಿತ್ರಕ್ಕೆ ಸಾಕಷ್ಟು ಸಮಯ, ಹಣ ಮೀಸಲಿಡಲಾಗಿದೆ. ಹಾಗಾಗಿ ಈ ಸಿನಿಮಾ ಮೇಲೆ ಪ್ರೇಕ್ಷಕರ ನಿರೀಕ್ಷೆ ಬೆಟ್ಟದಷ್ಟಿದೆ.

ಮನೀಶ್ ಶರ್ಮಾ ಆಯಕ್ಷನ್​ ಕಟ್​​ ಹೇಳುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್​ ಬಹುಬೇಡಿಕೆ ನಟಿ ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇಮ್ರಾನ್ ಹಶ್ಮಿ ವಿಲನ್​ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ಇಮ್ರಾನ್ ಹಶ್ಮಿ ತೆರೆ ಮೇಲೆ ಮುಖಾಮುಖಿಯಾಗಲಿದ್ದಾರೆ. ಟೈಗರ್ 3 ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ಹಿಂದಿ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!