October 12, 2026
Monday, October 12, 2026
spot_img

ಅಂಕೋಲಾದ ಪ್ರಥ್ವಿಯ ಸಾಧನೆಗೆ ಸಲಾಂ: ದೇಶಕ್ಕಾಗಿ ಹೋರಾಡಿದ ಅಜ್ಜ-ಅಜ್ಜಿಯ ಮೊಮ್ಮಗಳು ಈಗ ಸೇನೆಯಲ್ಲಿ ಅಧಿಕಾರಿ

ಹೊಸದಿಗಂತ ವರದಿ ಅಂಕೋಲಾ:

ಸ್ವಾತಂತ್ರ್ಯ ಹೋರಾಟದ ನೆಲವಾದ ಬಾಸಗೋಡದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಯುವತಿಯೋರ್ವಳು ಭಾರತೀಯ ಸೇನೆಯ ಆಫೀಸರ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಹೆಚ್ಚಿಸಿದ್ದಾಳೆ.

ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ದಿವಂಗತ ಬೊಮ್ಮಯ್ಯ ಮಾಣಿ ಗಾಂವಕರ ಮತ್ತು ಪಾರ್ವತಿ ಗಾಂವಕರ ಅವರ ಮೊಮ್ಮಗಳು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ದೇವಾನಂದ ಗಾಂವಕರ ಅವರ ಮಗಳು ಪ್ರಥ್ವಿ ಗಾಂವಕರ ಭಾರತೀಯ ಸೇನೆಯ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಹೆಮ್ಮೆ ತಂದಿದ್ದಾಳೆ.

ಇದನ್ನೂ ಓದಿ:

ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿರುವ ಪ್ರಥ್ವಿ ಹಿಮಾಲಯ ಕಾಲೇಜಿನಲ್ಲಿ ಪಿ.ಯು.ಸಿ ವಿಜ್ಞಾನ ಮುಗಿಸಿ ನಂತರ ಬೆಂಗಳೂರಿನ ನ್ಯೂ ಹೊರಿಜೋನ್ ಕಾಲೇಜಿನಲ್ಲಿ ತಾಂತ್ರಿಕ ಇಂಜನಿಯರಿಂಗ್ ಶಿಕ್ಷಣ ಪದವಿ ಪಡೆದಿದ್ದು ಅದರ ಜೊತೆಗೆ ಎನ್.ಸಿ.ಸಿ ತರಬೇತಿಯನ್ನು ಮುಗಿಸಿರುತ್ತಾಳೆ.

ಶಿಕ್ಷಣದ ಜೊತೆ ಸಾಂಸ್ಕೃತಿಕ ಮತ್ತು ಕ್ರೀಡಾ ರಂಗದಲ್ಲಿ ತೊಡಗಿಕೊಳ್ಳುವ ಮೂಲಕ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಪ್ರಥ್ವಿ ಗಾಂವಕರ ಇದೀಗ ತನ್ನ ಪರಿಶ್ರಮದ ಮೂಲಕ ದೇಶ ಸೇವೆಯ ಭಾರತೀಯ ಸೇನೆಯಲ್ಲಿ ಆಫೀಸರ್ ಆಗಿ ಆಯ್ಕೆಯಾಗಿದ್ದಾಳೆ.

Must Read