ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮರಾಜು ಪ್ರತಿಮೆ ಅನಾವರಣಗೊಳಿಸಿ ಮೋದಿ ಮಾತು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಂಧ್ರಪ್ರದೇಶದ ಭೀಮಾವರಂನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು. ಸೀತಾರಾಮರಾಜು 125 ನೇ ಜನ್ಮ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಸೀತಾರಾಮರಾಜು ಅವರ ಧೈರ್ಯ ಸಾಹಸವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಬುಡಕಟ್ಟು ಸಮುದಾಯದಿಂದ ಬಂದ ಹೋರಾಟಗಾರನನ್ನು ಸ್ಮರಿಸುತ್ತ ತಮ್ಮ ಸರ್ಕಾರ ಹೇಗೆ ಆ ಆಶಯಗಳಿಗೆ ಬದ್ಧ ಎಂಬುದನ್ನೂ ತಮ್ಮ ಮಾತುಗಳಲ್ಲಿ ಹೀಗೆ ಕಟ್ಟಿಟ್ಟರು ಪ್ರಧಾನಿ ನರೇಂದ್ರ ಮೋದಿ.

• ದೇಶದಲ್ಲಿ ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವದ ಆಚರಣೆಯ ಜೊತೆಗೆ 125ನೇ ಅಲ್ಲೂರಿ ಸೀತಾರಾಮರಾಜು ಜಯಂತಿಯನ್ನು ಆಚರಿಸುತ್ತಿದ್ದೇವೆ. ಆಂಧ್ರ ರಾಜ್ಯ ಪುಣ್ಯಭೂಮಿ ಮತ್ತು ವೀರರ ಭೂಮಿ, ಇಂತಹ ಪುಣ್ಯಭೂಮಿಗೆ ಬಂದಿರುವುದು ನನ್ನ ಅದೃಷ್ಟ.
• ತೆಲುಗು ವೀರ ಲೇವರಾ..ದೀಕ್ಷ ಭೂಮಿ ಸಾಗರಾ ಎಂದು ಸೀತಾರಾಮರಾಜರ ಹಾಡನ್ನು ಸ್ಮರಿಸಿದರು
• ನಮ್ಮ ನವ ಭಾರತ ನಮ್ಮ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಹೋರಾಟಗಾರರ ಕನಸಿನ ಭಾರತವಾಗಬೇಕು.
• ಅಲ್ಲೂರಿ ಸೀತಾರಾಮ ರಾಜು ಅವರ ತತ್ವಗಳ ಮೇಲೆ ನಾವು ನಡೆದಿದ್ದೇವೆ. ಆದಿವಾಸಿಗಳ ಕಲ್ಯಾಣಕ್ಕಾಗಿ ಕಳೆದ ಎಂಟು ವರ್ಷಗಳಿಂದ ಕೆಲಸ ಮಾಡಿದ್ದೇವೆ
• ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಬುಡಕಟ್ಟು ಮ್ಯೂಸಿಯಂಗಳು ನಿರ್ಮಾಣವಾಗುತ್ತಿವೆ. ದೇಶದಲ್ಲಿ ಬುಡಕಟ್ಟು ಜನಾಂಗದ ಗೌರವ ಮತ್ತು ಪರಂಪರೆಯನ್ನು ಪ್ರದರ್ಶಿಸಲು ಇದೊಂದು ವೇದಿಕೆಯಾಗಲಿದೆ
• ಅಲ್ಲೂರಿ ಸೀತಾರಾಮ ರಾಜು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂ ಕೂಡ ನಿರ್ಮಿಸಲಾಗುತ್ತಿದೆ
• ಹೋರಾಟಗಾರರ ತ್ಯಾಗಗಳ ಸರಮಾಲೆಯೇ ನಮಗೆ ಸ್ಫೂರ್ತಿ, ಭಾರತದ ಜನತೆಯ ಪರವಾಗಿ ಅಲ್ಲೂರಿ ಪಾದಗಳಿಗೆ ನನ್ನ ನಮಸ್ಕಾರ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!