ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಮಂತಾ ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ, ಬಾಲಿವುಡ್ ಆಫರ್‌ಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಫ್ಯಾಮಿಲಿ ಮ್ಯಾನ್ ಸೀರೀಸ್ ನಂತರ ಸಮಂತಾ ಖ್ಯಾತಿ ಡಬಲ್ ಆಗಿದೆ, ಸಮಂತಾ ನಟನೆಗೆ ಜನ ಬೋಲ್ಡ್ ಆಗಿದ್ದಾರೆ. ಇದೀಗ ಸಮಂತಾಗೆ ಬಾಲಿವುಡ್‌ನಿಂದ ಬಿಗ್ ಆಫರ್ ಒಂದು ಬಂದಿದೆ.
ನಟ ಸಲ್ಮಾನ್ ಖಾನ್ ಜೊತೆ ಸಮಂತಾ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ಇದನ್ನು ಕರಣ್ ಜೋಹರ್ ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಬಂಡವಾಳ ಕೂಡ ಹೂಡ್ತಿದ್ದಾರೆ.
ಬಾಲಿವುಡ್‌ನ ರನ್ನಿಂಗ್ ಸಿನಿಮಾ ಜವಾನ್‌ನಲ್ಲಿ ನಯನತಾರಾ ಪಾತ್ರವನ್ನು ಕೂಡ ಸಮಂತಾಗೆ ಆಫರ್ ಮಾಡಲಾಗಿತ್ತು ಆದರೆ ಸಮಂತಾ ಪಾತ್ರ ಒಪ್ಪಿರಲಿಲ್ಲ. ನಂತರ ದೀಪಿಕಾ ಪಾತ್ರಕ್ಕಾಗಿ ಸಮಂತಾರನ್ನು ಅಪ್ರೋಚ್ ಮಾಡಲಾಗಿತ್ತು, ಅದನ್ನೂ ಸಮಂತಾ ಒಪ್ಪಿಲ್ಲ ಎನ್ನಲಾಗಿದೆ.