ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರ್ಯಾಣದ ನೂಹ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಬಂಧಿಸಿದ್ದು, 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಫಿರೋಜ್‌ಪುರ್ ಝಿರ್ಕಾ ಕ್ಷೇತ್ರದ ಶಾಸಕ ಮಮ್ಮನ್ ಖಾನ್‌ರನ್ನು ಬಂಧಿಸಿ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಖಾನ್ ವಿರುದ್ಧ ನಾಲ್ಕು ಪ್ರಕರಣ ದಾಖಲಾಗಿದ್ದು, ಲ್ಯಾಪ್‌ಟಾಪ್, ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.
ಜು.31ರಂದು ನಾಗಿನಾ ಪ್ರದೇಶದಲ್ಲಿ ಧಾರ್ಮಿಕ ಯಾತ್ರೆ ನಡೆಸುತ್ತಿದ್ದವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು, ಆರು ಮಂದಿ ಮೃತಪಟ್ಟಿದ್ದು, 88 ಮಂದಿಗೆ ಗಾಯಗಳಾಗಿತ್ತು. ಈ ದಾಳಿ ಹಿಂದೆ ಮಮ್ಮನ್ ಖಾನ್ ಇರುವ ಆರೋಪ ಇದ್ದು, ವಿಚಾರಣೆ ನಡೆಯುತ್ತಿದೆ.