ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸೋಭಿತಾ ಧುಲಿಪಾಲ ಹಾಗೂ ನಾಗಚೈತನ್ಯ ಮದುವೆ ಸಂಭ್ರಮ ಆರಂಭವಾಗಿದೆ. ಇತ್ತೀಚೆಗಷ್ಟೇ ಅರಿಶಿಣ ಶಾಸ್ತ್ರದ ಫೋಟೊಗಳು ವೈರಲ್ ಆಗಿದ್ದು, ಸೋಭಿತಾ ಅದ್ಭುತವಾಗಿ ಕಾಣಿಸಿದ್ದಾರೆ.
ಇದೀಗ ಮತ್ತೊಂದು ಶಾಸ್ತ್ರದ ಫೋಟೊ ವೈರಲ್ ಆಗಿದ್ದು, ಅದಕ್ಕೆ ʼBeautiful Brideʼ ಎಂದು ಸಮಂತಾ ಕಮೆಂಟ್ ಮಾಡಿದ್ದಾರೆ. ನಟಿ, ನಾಗಚೈತನ್ಯ ಎಕ್ಸ್ ವೈಫ್ ಸಮಂತಾ ಅಲ್ಲ, ಸೋಭಿತಾ ತಂಗಿ ಸಮಂತಾ!
ನಟಿ ಸಮಂತಾ ಸದ್ಯ ಮೀಡಿಯಾದಿಂದ ದೂರ ಉಳಿದಿದ್ದಾರೆ. ನಾಗಚೈತನ್ಯ ಹಾಗೂ ಸೋಭಿತಾ ಮದುವೆಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಹಾಕಿಲ್ಲ. ಸೋಭಿತಾ ತಂಗಿಯ ಹೆಸರೂ ಸಮಂತಾ ಆಗಿದ್ದು, ಅಕ್ಕ ನೀನು ಅತೀ ಸುಂದರ ವಧು ಎಂದು ಕಮೆಂಟ್ ಮಾಡಿದ್ದಾರೆ.