Wednesday, February 8, 2023

Latest Posts

ʻನನಗೆ ಬಂದಿರುವ ಕಾಯಿಲೆ ನಿನಗೆ ಬರದಿರಲಿʼ: ನೆಟ್ಟಿಗರಿಗೆ ಕೌಂಟರ್‌ ಕೊಟ್ಟ ನಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರೂ ಕೂಡ ಯಶೋದಾ ಸಿನಿಮಾ ರಿಲೀಸ್ ವೇಳೆ ವೈಯಕ್ತಿಕ ಸಂದರ್ಶನದ ಮೂಲಕ ಕ್ಯಾಮೆರಾ ಮುಂದೆ ಬಂದಿದ್ದರು. ಬಹಳ ದಿನಗಳ ನಂತರ ಸಮಂತಾ ಶಾಕುಂತಲಂ ಚಿತ್ರದ ಟ್ರೈಲರ್ ಕಾರ್ಯಕ್ರಮ ನಿನ್ನೆ ಹೈದರಾಬಾದ್‌ನಲ್ಲಿ ನಿನ್ನೆ ಮತ್ತೆ ಮಾಧ್ಯಮದ ಮುಂದೆ ಬಂದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಮಂತಾ ಲುಕ್ ಬಗ್ಗೆ ಹಲವು ಕಥೆಗಳು ಹರಿದಾಡಿದ್ದವು. ಈ ಕ್ರಮದಲ್ಲಿ ಸಮಂತಾ ಒಂದು ಸೈಟ್ ಮಾಡಿದ ಟ್ವೀಟ್ ಗೆ ಕೌಂಟರ್ ಕೊಟ್ಟಿದ್ದಾರೆ. ವಿಚ್ಛೇದನದ ನಂತರ ಧೈರ್ಯವಾಗಿ ನಿಂತು ವೃತ್ತಿ ಬದುಕಿನಲ್ಲೂ ಉತ್ತುಂಗಕ್ಕೇರಿದ್ದರು. ಆದರೆ ಆಕೆಗೆ ಬಂದ ಖಾಯಿಲೆ ಆಕೆಯನ್ನು ಮತ್ತೆ ಬಲಹೀನರನ್ನಾಗಿಸಿದ್ದಲ್ಲದೆ. ಅವರ ಮುಖದಲ್ಲಿ ಚಾರ್ಮ್‌ ಅಂಡ್‌ ಗ್ಲೋ ಕಡಿಮೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಸಮಂತಾ.. ‘ನನಗೆ ಬಂದಿರುವ ಅಪರೂಪದ ಕಾಯಿಲೆ ನಿನಗೆ ಬಾರದಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನಾನು ತಿಂಗಳುಗಟ್ಟಲೆ ತೆಗೆದುಕೊಂಡ ಚಿಕಿತ್ಸೆಯನ್ನು ನೀವು ತೆಗೆದುಕೊಳ್ಳಬಾರದೆಂದು ನಾನು ಬಯಸುತ್ತೇನೆ.  ನಿಮ್ಮ ಚಾರ್ಮ್‌ ಅಂಡ್‌ ಗ್ಲೋ ಹೆಚ್ಚಾಗಲ ಎಂದು ನಾನು ತೋರಿಸುತ್ತಿರುವ ಪ್ರೀತಿ,’ ಎಂದು ಕೌಂಟರ್ ಕೊಟ್ಟಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!