Friday, February 3, 2023

Latest Posts

ಎರಡು ವಿಭಾಗದಲ್ಲಿ ಆಸ್ಕರ್‌ಗೆ ಅರ್ಹತೆ ಪಡೆದ ‘ಕಾಂತಾರ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಾದ್ಯಂತ ಹೆಸರು ಮಾಡಿದ ಕನ್ನಡದ ಕಾಂತಾರ ಇದೀಗ ಆಸ್ಕರ್‌ನತ್ತ ಹೆಜ್ಜೆ ಇಡುತ್ತಿದೆ.
ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರ ಅರ್ಹತಾ ಸುತ್ತಿನಲ್ಲಿ ಪಾಸ್ ಆಗಿದೆ. ಆಸ್ಕರ್ ಸದಸ್ಯರು ಮತ ಚಲಾಯಿಸಿದರೆ ಕಾಂತಾರ ಮುಖ್ಯ ನಾಮಿನೇಷನ್‌ಗ ಎಂಟ್ರಿ ನೀಡಲಿದೆ. ಈವರೆಗೂ 301 ಸಿನಿಮಾಗಳು ಅರ್ಹತಾ ಸುತ್ತನ್ನು ಪಾಸ್ ಮಾಡಿವೆ.

ಈ ಖುಷಿಯನ್ನು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಕಾಂತಾರ ಎರಡು ಆಸ್ಕರ್ ಅರ್ಹತೆ ಪಡೆದಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ಎಲ್ಲವೂ ಒಳ್ಳೆಯದೇ ಆಗಲಿ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!