ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲನಚಿತ್ರಗಳಿಂದ ವಿರಾಮ ಘೋಷಿಸಿರುವ ಸಮಂತಾ ತಮ್ಮ ಮೈಯೋಸಿಟಿಸ್ ಚಿಕಿತ್ಸೆಗಾಗಿ ವಿದೇಶಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಔಷಧ ಬಳಸುತ್ತಲೇ ಮನಸ್ಸಂತೋಷಕ್ಕಾಗಿ ಪ್ರಕೃತಿಯ ಮೊರೆ ಹೋಗಿದ್ದಾರೆ. ಇಶಾ ಫೌಂಡೇಶನ್, ಕೊಯಮತ್ತೂರು, ನಂತರ ಬಾಲಿ, ಇಂಡೋನೇಷ್ಯಾ, ನಂತರ ಮಯೋಸಿಟಿಸ್ ಚಿಕಿತ್ಸೆಗಾಗಿ ಅಮೇರಿಕಾದ ನ್ಯೂಯಾರ್ಕ್ಗೆ ಹೋದರು.
ಇದೀಗ ಸಮಂತಾ ಆಸ್ಟ್ರಿಯಾ ಪ್ರವಾಸದಲ್ಲಿದ್ದು, ಎಂಜಾಯ್ ಮಾಡುತ್ತಿರುವ ಅಲ್ಲಿನ ಸ್ಥಳಗಳ ಚಿತ್ರಗಳನ್ನು ತೆಗೆದು ತನ್ನ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಆಸ್ಟ್ರಿಯಾದ ಸೆಲ್ಜ್‌ಬರ್ಗ್ ನಗರದಲ್ಲಿನ ಸರೋವರದ ಪಕ್ಕದಲ್ಲಿ ಸೈಕ್ಲಿಂಗ್ ಮಾಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸೈಕ್ಲಿಂಗ್ ವಿಡಿಯೋಗಳ ಜೊತೆಗೆ ಸಮಂತಾ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸರೋವರದ ಬಳಿ ಕುಳಿತು ಪ್ರಕೃತಿಯನ್ನು ಆನಂದಿಸುತ್ತಿರುವ ಚಿತ್ರಗಳೂ ಸದ್ಯ ವೈರಲ್ ಆಗುತ್ತಿವೆ.