Sunday, December 3, 2023

Latest Posts

WOMEN | ರೆಗ್ಯುಲರ್ ಪಿರಿಯಡ್ಸ್‌ಗಾಗಿ ಹೀಗೆ ಮಾಡಿ, ಆರೋಗ್ಯದಲ್ಲಿ ಸುಧಾರಣೆ ಖಂಡಿತ..

ಕೆಲವರಿಗೆ ಹಾರ್ಮೋನ್ ತೊಂದರೆಯಿಂದಾಗಿ ಸರಿಯಾಗಿ ತಿಂಗಳಿಗೊಮ್ಮೆ ಪಿರಿಯಡ್ಸ್ ಆಗೋದಿಲ್ಲ. ಮೊದಲು ಇದೇನು ಸಮಸ್ಯೆ ಎನಿಸದಿದ್ದರೂ ಬರುಬರುತ್ತಾ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ರೆಗ್ಯುಲರ್ ಪಿರಿಯಡ್ಸ್‌ಗಾಗಿ ಈ ರೀತಿ ಮಾಡಿ..

 1. ಯೋಗಾಭ್ಯಾಸಕ್ಕೆ ಯೆಸ್ ಎನ್ನಿ
 2. ಆರೋಗ್ಯಕರ ತೂಕ ನಿಮ್ಮದಾಗಿರಲಿ.
 3. ವ್ಯಾಯಾಮ, ವಾಕ್, ಜಾಗ್ ಒಂದಾದರೂ ಮಾಡಿ.
 4. ಊಟದಲ್ಲಿ ಶುಂಠಿ ಸೇವನೆ ಇರಲಿ.
 5. ಚಕ್ಕೆ ಪುಡಿ ನೀರಿಗೆ ಬೆರೆ ಆಗಾಗ ಕುಡಿಯಿರಿ.
 6. ಪ್ರತಿದಿನ ವಿಟಮಿನ್‌ಯುಕ್ತ ಆಹಾರ ಸೇವಿಸಿ. ವಿಟಮಿನ್ ಡಿ ಕೂಡ ಪಡೆಯಿರಿ.
 7. ಪ್ರತಿದಿನ ಆಪಲ್ ಸೈಡರ್ ವಿನೇಗರ್ ಸೇವನೆ ರೂಢಿ ಮಾಡಿ.
 8. ಪೈನಾಪಲ್, ಪಪಾಯ ವಾರಕ್ಕೆರೆಡು ಬಾರಿ ಸೇವಿಸಿ.
 9. ಪಪ್ಪಾಯ ಕಾಯಿ ಸೇವನೆ ಮಾಡಿ
 10. ಊಟದಲ್ಲಿ ಬೆಲ್ಲ ಬಳಕೆ ಮಾಡಿ
 11. ಅರಿಶಿಣ ಹಾಲು ದಿನವೂ ಕುಡಿಯಿರಿ
 12. ಹಾರ್ಮೋನ್ ಬ್ಯಾಲೆನ್ಸ್ ಆಗಿಡಲು ಲೋಳೆಸರ ಸಹಾಯ ಮಾಡುತ್ತದೆ, ಆಹಾರದಲ್ಲಿ ಅದನ್ನು ಸೇರಿಸಿ
 13. ಬೀಟ್ರೂಟ್‌ನಲ್ಲಿ ಫಾಲಿಕ್ ಹಾಗೂ ಐರನ್ ಅಂಶ ಹೆಚ್ಚಿದೆ, ಹೀಮೋಗ್ಲೊಬಿನ್ ಹೆಚ್ಚಾಗುತ್ತದೆ. ಹಾಗಾಗಿ ಇದನ್ನು ಸೇವನೆ ಮಾಡಿ
 14. ವ್ಯಾಯಾಮ ಮಾಡುವುದು, ಬಿಡುವುದು, ವಾಕ್ ನಾಲ್ಕು ದಿನ ಹೋಗುವುದು ಮತ್ತೆ ಬಿಡುವುದು ಹೀಗೆ ಮಾಡಬೇಡಿ, ಒಂದೇ ರೀತಿ ಅಭ್ಯಾಸ ಇರಲಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!